ಅಣೆಕಟ್ಟೆ ನೀರು ಆವಿಯಾಗುವುದನ್ನು ತಡೆಗಟ್ಟಲು ತಮಿಳುನಾಡು ಸಚಿವರ ಸಖತ್ ಐಡಿಯಾ!

ತಮಿಳುನಾಡು ಸರ್ಕಾರದ ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಥರ್ಮಾಕೋಲ್‌ ನ್ನು ಬಳಕೆ ಮಾಡಿ ನೀರು ಆವಿಯಾಗುವ ಸಮಸ್ಯೆಯನ್ನು ತಡೆಯುವ ವಿಧಾನವನ್ನು ಕಂಡುಕೊಂಡಿದ್ದಾರೆ.
ಅಣೆಕಟ್ಟೆ ನೀರು ಆವಿಯಾಗುವುದನ್ನು ತಡೆಗಟ್ಟಲು ತಮಿಳುನಾಡು ಸಚಿವರ ಸಖತ್ ಐಡಿಯಾ!
ಮಧುರೈ: ನೀರಿಗೆ ಹಾಹಾಕಾರ ಎದುರಾಗುತ್ತಿದ್ದು, ಜೀವ ಜಲದ ರಕ್ಷಣೆಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಆದರೆ ಕೆರೆ ನೀರು ಆವಿಯಾಗುವುದನ್ನು ತಡೆಗಟ್ಟಲು ತಮಿಳುನಾಡಿನ ಈ ಸಚಿವನಿಗೆ ಹೊಳೆದಷ್ಟು ಅದ್ಭುತವಾದ ಐಡಿಯಾ ಬಹುಶಃ ವಿಶ್ವವಿಖ್ಯಾತ ವಿಜ್ಞಾನಿಗಳಿಂದ ಶಾಲೆ ವಿದ್ಯಾರ್ಥಿಗಳವರೆಗೂ ಯಾರಿಗೂ ಹೊಳೆದಿರಲು ಸಾಧ್ಯವಿಲ್ಲ! 
ತಮಿಳುನಾಡು ಸರ್ಕಾರದ ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಥರ್ಮಾಕೋಲ್‌ ನ್ನು ಬಳಕೆ ಮಾಡಿ ನೀರು ಆವಿಯಾಗುವ ಸಮಸ್ಯೆಯನ್ನು ತಡೆಯುವ ವಿಧಾನವನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೇ, ವೈಗೈ ಅಣೆಕಟ್ಟೆಯಲ್ಲಿ ಥರ್ಮಾಕೋಲ್ ನ್ನು ಒಂದಕ್ಕೆ ಒಂದನ್ನು ಅಂಟಿಸಿ ನೀರಿನ ಮೇಲ್ಮೈನಲ್ಲಿರಿಸುವ ಸಚಿವರ ವಿನೂತನ ಐಡಿಯಾ ಪ್ರಾಯೋಗಿಕವಾಗಿ ನಡೆದಿದ್ದನ್ನು ರಾಜ್ಯದ ಪ್ರಮುಖ ಮಾಧ್ಯಮಗಳ ವರದಿಗಾರರೂ ಸಹ ಕಣ್ತುಂಬಿಕೊಂಡಿದ್ದಾರೆ. 
ತಮ್ಮ ಸಂಶೋಧನೆಯನ್ನು ತೋರಿಸಲೆಂದೇ ಸಚಿವರು ವರದಿಗಾರರನ್ನು ಮಧುರೈ ನಿಂದ 67 ಕಿಮೀ ದೂರ ಕರೆದುಕೊಂಡು ಹೋಗಿದ್ದರು. ಎರಡು ಥರ್ಮಾಕೋಲ್ ನ್ನು ಅಂಟಿಸಿ ಅದನ್ನು ನೀರಿನ ಮೇಲಿಟ್ಟ ತಕ್ಷಣವೇ ಗಾಳಿಗೆ ತೂರಿ ಹೋಗುತ್ತಿತ್ತು. ಇನ್ನೂ ಕೆಲವು ಮುರಿದು ಹೋಗುತ್ತಿದ್ದವು. ಕೊನೆಗೆ ಏನೆಂದರೂ ಸಹ ಥರ್ಮಾಕೋಲ್ ಪ್ರಯೋಗ ಯಶಸ್ವಿಯಾಗಲಿಲ್ಲ. 
ಅಚ್ಚರಿಯೆಂದರೆ ತಮಿಳುನಾಡು ಸರ್ಕಾರದ ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಅವರೇ ಹೇಳುವ ಪ್ರಕಾರ ನೀರು ಆವಿಯಾಗುವುದನ್ನು ತಡೆಗಟ್ಟುವ ಪ್ರಯೋಗಾತ್ಮಕ ವಿಧಾನಗಳಿಗಾಗಿಯೇ ತಮಿಳುನಾಡು ಸರ್ಕಾರ 10 ಲಕ್ಷ ರೂಪಾಯಿ ಅನುದಾನ ನೀಡಿದೆಯಂತೆ. ಸರ್ಕಾರದ ಅನುದಾನದಲ್ಲಿ ಯೋಜನೆ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದರಂತೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com