ಅಲ್ ಖೈದಾ ಉಗ್ರ ಸಂಘಟನೆಯ ಮುಖಂಡ ಅಯ್ಮಾನ್ ಅಲ್-ಜವಾಹರಿ ಕರಾಚಿಯಲ್ಲಿದ್ದು, ಪಾಕಿಸ್ತಾನದ ನಟೋರಿಯಸ್ ಗುಪ್ತಚರ ಸಂಸ್ಥೆ ಐಎಸ್ಐ ರಕ್ಷಣೆಯಲ್ಲಿ ವಾಸಿಸುತ್ತಿದ್ದಾನೆ ಎಂದು ನ್ಯೂಸ್ ವೀಕ್ ಹೇಳಿದೆ. ವಿಶ್ವದ ಮೋಸ್ಟ್ ವಾಂಟೆಡ್ ಉಗ್ರನೊಬ್ಬನ ಅಡಗುದಾಣದ ಬಗ್ಗೆ ಮಾಹಿತಿಯುಳ್ಳ ವರದಿಯನ್ನು ನ್ಯೂಸ್ ವೀಕ್ ಪ್ರಕಟಿಸಿದೆ.