ಇತ್ತೀಚಿಗೆ ನಡೆದ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಸೋಲಿಗೆ ಇವಿಎಂಗಳನ್ನು ದೂರದ ಶಿವಸೇನೆ, ಒಂದು ಕಾಲದಲ್ಲಿ ಕಾಂಗ್ರೆಸ್ ಏನೂ ಅಭಿವೃದ್ಧಿ ಕೆಲಸಗಳನ್ನು ಮಾಡದಿದ್ದರೂ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹಿರೋ ಆಗುತ್ತಿತ್ತು. ಈಗ ಆ ಟೈಮ್ ಬಿಜೆಪಿಗೆ ಬಂದಿದ್ದು, ಕೆಲಸದಲ್ಲಿ ಝಿರೋ ಆಗಿದ್ದರೂ ಚುನಾವಣೆಯಲ್ಲಿ ಹಿರೋ ಆಗಿದೆ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ದೂರಿದೆ.