ಸಿಬಿಎಸ್ಇ: 'ಗ್ರೇಸ್ ಮಾರ್ಕ್ಸ್' ಪದ್ಧತಿ ರದ್ದು!

ಹೆಚ್ಚಿನ ಕಟ್ ಆಫ್ ಅಂಕಗಳನ್ನು ನಿಯಂತ್ರಿಸಲು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್ಇ) ಮಿತಿ ನೀತಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಹೆಚ್ಚಿನ ಕಟ್ ಆಫ್ ಅಂಕಗಳನ್ನು ನಿಯಂತ್ರಿಸಲು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ(ಸಿಬಿಎಸ್ಇ) ಮಿತಿ ನೀತಿ(Moderation policy)ಯನ್ನು ತೆಗೆದುಹಾಕಲಾಗಿದೆ.ಅಂದರೆ ಇನ್ನು ಮುಂದೆ 15 ಅಂಕಗಳ ಗ್ರೇಸ್ ಮಾರ್ಕ್ಸ್ ಗಳಿರುವುದಿಲ್ಲ.
ಈ ನಿರ್ಧಾರವನ್ನು ಮಂಡಳಿಯ ಉನ್ನತ ಮಟ್ಟದ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವದೇಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸರಿಯಾದ ಅಂಕಗಳನ್ನು ಪರೀಕ್ಷೆಗಳಲ್ಲಿ ನೀಡಬೇಕು. ಕಷ್ಟದ ಪರೀಕ್ಷೆ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನೀಡಲಾಗುತ್ತಿದ್ದ ಗ್ರೇಸ್ ಮಾರ್ಕ್ಸ್ ಇನ್ನು ಮುಂದೆ ಇರುವುದಿಲ್ಲ ಎಂದರು.
ಪರೀಕ್ಷೆ ಕಷ್ಟವಿತ್ತು ಎಂದು ಗ್ರೇಸ್ ಅಂಕಗಳನ್ನು ನೀಡಿದರೆ ಚೆನ್ನಾಗಿ ಪರೀಕ್ಷೆ ಬರೆದವರಿಗೆ ಇನ್ನೂ ಹೆಚ್ಚು ಅಂಕ ಸಿಗುತ್ತದೆ. ಪರೀಕ್ಷೆ ಚೆನ್ನಾಗಿ ಬರೆಯದಿದ್ದವರಿಗೆ ಕಡಿಮೆ ಅಂಕ ಬರುತ್ತದೆ. ಕಟ್ ಆಫ್ ಮಾರ್ಕ್ಸ್ ವಿಷಯ ಬಂದಾಗ ಕಡಿಮೆ ಅಂಕ ಸಿಕ್ಕಿದವರೆಗೆ ಮುಂದೆ ಕಾಲೇಜಿನಲ್ಲಿ ಸೀಟು ಸಿಗಲು ತೊಂದರೆಯಾಗುತ್ತದೆ. ಇದರಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವರು ತಿಳಿಸಿದರು.
 ಶಾಲೆಗಳು ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳ ಬದಲಾಗಿ ಸರಿಯಾದ ಅಂಕಗಳನ್ನು ನೀಡಬೇಕು. ಗ್ರೇಸ್ ಮಾರ್ಕ್ಸ್ ಒಂದು ಸಲಹೆಯಷ್ಟೆ. ಇದು ಒಂದು ಉತ್ತಮ ಸಹಮತವಾಗಿದ್ದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡೋಣ. ಅಂಕಗಳು ಸರಿಯಾಗಿದ್ದು ಸ್ಪರ್ಧೆಯಿದೆ ಎಂದು ಯದ್ವಾತದ್ವ ಅಂಕಗಳನ್ನು ನೀಡಬಾರದು ಎಂದು ಅವರು ಹೇಳಿದರು.
ಖಾಸಗಿ ಪ್ರಕಾಶಕರ ಸಿಬಿಎಸ್ಇ ಪುಸ್ತಕಗಳಿಗೆ ಅಧಿಕ ಬೆಲೆಯಿದೆ ಎಂದು ಪೋಷಕರು ದೂರು ನೀಡಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಎನ್ ಸಿಇಆರ್ ಟಿ ಪುಸ್ತಕಗಳನ್ನು ಪರಾಮರ್ಶಿಸಿ ಅದನ್ನು ಕಡ್ಡಾಯ ಮಾಡುತ್ತೇವೆ. ಉತ್ತಮವಾದ ಮತ್ತು ಕೈಗೆಟಕುವ ಬೆಲೆಯ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಸಿಗುವಂತೆ ಮಾಡಲಾಗುವುದು. ಇದರಲ್ಲಿ ಯಾವುದೇ ಮೋಸ ನಡೆಯಬಾರದು ಎಂದರು.
ಬೋರ್ಡ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳಲ್ಲಿ ಭಾರೀ ಏರಿಳಿತವಾಗುವುದರಿಂದ ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿಯನ್ನು ತೆಗೆದುಹಾಕಬೇಕೆಂದು ಸಿಬಿಎಸ್ಇ ಕಳೆದ ಡಿಸೆಂಬರ್ ನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿತ್ತು. 
ಆದರೆ ವಿದ್ಯಾರ್ಥಿಗೆ ಇನ್ನು ಸ್ವಲ್ಪ ಅಂಕ ಸಿಕ್ಕಿದರೆ ತೇರ್ಗಡೆ ಹೊಂದಲು ಸಾಧ್ಯವಾಗುತ್ತದೆ ಎಂದು ಇರುವವರಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದು ಎಂದು ಸಿಬಿಎಸ್ ಇ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com