ಗೋವುಗಳಿಗೆ ವಿಶಿಷ್ಠ ಗುರುತು ಸಂಖ್ಯೆ: ಮೋದಿಯವರನ್ನು ಟೀಕಿಸಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್

ಭಾರತ-ಬಾಂಗ್ಲಾ ಮೂಲಕ ಗೋವುಗಳನ್ನು ಕಳ್ಳಸಾಗಣೆ ಮಾಡುವುದನ್ನು ತಡೆಗಟ್ಟಲು ಮತ್ತು...
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್
ನವದೆಹಲಿ: ಭಾರತ-ಬಾಂಗ್ಲಾ ಮೂಲಕ ಗೋವುಗಳನ್ನು  ಕಳ್ಳಸಾಗಣೆ ಮಾಡುವುದನ್ನು ತಡೆಗಟ್ಟಲು ಮತ್ತು ರಕ್ಷಣೆಗೆ ಕೇಂದ್ರ ಸರ್ಕಾರ ದನ-ಕರುಗಳಿಗೆ ಆಧಾರ್ ನಂತರ ವಿಶಿಷ್ಟ ಗುರುತು ಸಂಖ್ಯೆ ನೀಡುವ ಯೋಜನೆಯನ್ನು ಟೀಕಿಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್,  ಕಾರ್ಯವಿಧಾನದ ಬಗ್ಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ಕಾರ್ಯಯೋಜನೆಯ ವೆಚ್ಚವನ್ನು ಭರಿಸುವವರು ಯಾರು ಮತ್ತು ಈ ನಿಯಮ ಜಾರಿಗೆ ಬಂದರೆ ಮುಸಲ್ಮಾನರು ಸಾಕುವ ಹಸು ಕರುಗಳಿಗೆ ಸಹ ರಕ್ಷಣೆಯಿದೆಯೇ ಎಂದು ಕೇಳಿದರು.
ತಮ್ಮ ಆಕ್ರೋಶವನ್ನು ಸರಣಿ ಟ್ವೀಟ್ ಮೂಲಕ ಟ್ವಿಟ್ಟರ್ ನಲ್ಲಿ ವ್ಯಕ್ತಪಡಿಸಿದ ದಿಗ್ವಿಜಯ್ ಸಿಂಗ್, ಮೋದಿಯವರಿಗೆ ಏನಾಗಿದೆ? ಆಧಾರ್ ಕಾರ್ಡನ್ನು ಇದೀಗ ಹಸು ಕರುಗಳಿಗೂ ಕಡ್ಡಾಯ ಮಾಡಲು ಹೊರಟಿದ್ದಾರೆ. ಇದಕ್ಕೆಲ್ಲಾ ಎಷ್ಟು ವೆಚ್ಚ ತಗಲಬಹುದು? ಈ ವೆಚ್ಚವನ್ನು ಯಾರು ಭರಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಈ ನಿಯಮ ಜಾರಿಗೆ ಬಂದರೆ ಗೋ ರಕ್ಷಕರಿಂದ ಮುಸಲ್ಮಾನ ಪ್ರಾಣಿಗಳ ಪಾಲಕರಿಗೆ ಸುರಕ್ಷತೆಯ ಖಾತರಿಯಿದೆಯೇ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com