ಭಾರತದಲ್ಲಿ ನಾನು ಸಾಕಷ್ಟು ಜನಾಂಗೀಯ ನಿಂದನೆ ಎದುರಿಸಿದ್ದೇನೆ: ಮಿಜೋರಾಂ ಸಿಎಂ

ಭಾರತದ ಪ್ರಮುಖ ನಗರಗಳಲ್ಲಿ ಈಶಾನ್ಯ ರಾಜ್ಯದ ಜನರ ಮೇಲಿನ ಜನಾಂಗೀಯ ನಿಂದನೆಯನ್ನು ಖಂಡಿಸಿರುವ ಮಿಝೋರಾಂ....
ಲಾಲ್ ತನ್ಹಾವ್ಲಾ
ಲಾಲ್ ತನ್ಹಾವ್ಲಾ
ನವದೆಹಲಿ: ಭಾರತದ ಪ್ರಮುಖ ನಗರಗಳಲ್ಲಿ ಈಶಾನ್ಯ ರಾಜ್ಯದ ಜನರ ಮೇಲಿನ ಜನಾಂಗೀಯ ನಿಂದನೆಯನ್ನು ಖಂಡಿಸಿರುವ ಮಿಝೋರಾಂ ಮುಖ್ಯಮಂತ್ರಿ ಲಾಲ್ ತನ್ಹಾವ್ಲಾ ಅವರು, ದೇಶದ ವಿವಿಧ ಭಾಗಗಳಲ್ಲಿ ಸ್ವತಃ ತಾವೂ ಜನಾಂಗೀಯ ನಿಂದನೆಗೆ ಒಳಗಾಗಿರುವುದಾಗಿ ಹೇಳಿದ್ದಾರೆ.
ಈ ದೇಶದಲ್ಲಿ ಜನಾಂಗೀಯ ನಿಂದನೆ ಎಂಬುದು ಅತ್ಯಂತ ಕೆಟ್ಟ ವಿಚಾರ. ಸಾಕಷ್ಟು ಬಾರಿ ನಾನು ಸಹ ಈ ರೀತಿಯ ನಿಂದನೆಗಳನ್ನು ಎದುರಿಸಿದ್ದೇನೆ. ಸ್ವತಃ ತಮ್ಮ ದೇಶವ ಬಗ್ಗೆಯೇ ತಿಳಿದುಕೊಳ್ಳದ ಈ ಜನಗಳು ಮೂರ್ಖರು ಎಂದು 74 ವರ್ಷದ ಮಿಝೋರಾಂ ಮುಖ್ಯಮಂತ್ರಿ ಐಎಎನ್ಎಸ್ ಗೆ ನೀಡಿದ ಸಂದರ್ಶನದಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸುಮಾರು 20-25 ವರ್ಷಗಳ ಹಿಂದೆ ಒಂದು ಆರತಕ್ಷತೆ ಕಾರ್ಯಕ್ರಮದಲ್ಲಿ ಒಬ್ಬ ವ್ಯಕ್ತಿ ನನಗೆ 'ನೀವು ನೋಡಲು ಭಾರತೀಯನಂತೆ ಕಾಣಿಸುತ್ತಿಲ್ಲ ಎಂದರು. ಆದಕ್ಕೆ ನಾನು ಭಾರತೀಯನಂತೆ ಕಾಣಬೇಕಾದರೆ ಏನು ಮಾಡಬೇಕು ಅಂತ ಒಂದೇ ವಾಕ್ಯದಲ್ಲಿ ಹೇಳಿ' ಎಂದೆ ಎಂದರು.
ಐದು ಮುಖ್ಯಮಂತ್ರಿಯಾಗಿರುವ ಲಾಲ್ ತನ್ಹಾವ್ಲಾ ಅವರು, ಜನಸಾಮಾನ್ಯರು ಮಾತ್ರ ಜನಾಂಗೀಯ ನಿಂದನೆ ಮಾಡಲ್ಲ. ರಾಷ್ಟ್ರ ಮಟ್ಟದ ರಾಜಕಾರಣಿಗಳು ಸಹ ಜನಾಂಗೀಯ ನಿಂದನೆ ಮಾಡುತ್ತಾರೆ. ಅವರಿಗೆ ಭಾರತದ ಮೂಲ ಉದ್ದೇಶ ಏನೂ ಅಂತ ಗೊತ್ತಿಲ್ಲ ಎಂದಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಅಥವಾ ಇತರೆ ರಾಜಕೀಯ ಪಕ್ಷಗಳ ಹಲವರು ನಾಯಕರಿಗೆ ತಮ್ಮ ದೇಶದ ಬಗ್ಗೆಯೇ ಗೊತ್ತಿಲ್ಲ ಮತ್ತು ಇದು ತುಂಬಾ ಮೂರ್ಖತನದ್ದು ಎಂದು ಆಕ್ರೋಶ ವ್ಯಕ್ಯಪಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ, ತಮ್ಮ ದೇಶದ ಬಗ್ಗೆಯೇ ಗೊತ್ತಿಲ್ಲದವರು ನಾಯಕರಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com