ಕೃಷಿ ಆದಾಯಕ್ಕೂ ತೆರಿಗೆ ವಿಧಿಸಬೇಕು
ದೇಶ
ಕೃಷಿ ಆದಾಯಕ್ಕೂ ತೆರಿಗೆ ವಿಧಿಸಬೇಕು: ನೀತಿ ಆಯೋಗದ ಸದಸ್ಯ
ಖ್ಯಾತ ಅರ್ಥಶಾಸ್ತ್ರಜ್ಞ, ನೀತಿ ಆಯೋಗದ ಸದಸ್ಯ ವಿವೇಕ್ ಡೆಬ್ರಾಯ್ ಕೃಷಿ ಆದಾಯಕ್ಕೂ ತೆರಿಗೆ ವಿಧಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಖ್ಯಾತ ಅರ್ಥಶಾಸ್ತ್ರಜ್ಞ, ನೀತಿ ಆಯೋಗದ ಸದಸ್ಯ ವಿವೇಕ್ ಡೆಬ್ರಾಯ್ ಕೃಷಿ ಆದಾಯಕ್ಕೂ ತೆರಿಗೆ ವಿಧಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತೆರಿಗೆ ಮೂಲವನ್ನು ವಿಸ್ತರಿಸಬೇಕಾಗಿದ್ದು, ಕೃಷಿ ಆದಾಯಕ್ಕೂ ಸಹ ತೆರಿಗೆ ವಿಧಿಸಬೇಕಿದೆ ಎಂದು ವಿವೇಕ್ ಡೆಬ್ರಾಯ್ ಅಭಿಪ್ರಾಯಪಟ್ಟಿದ್ದು, ವೈಯಕ್ತಿಕ ಆದಾಯ ತೆರಿಗೆಗೆ ನೀಡಲಾಗುವ ವಿನಾಯಿತಿಯನ್ನೂ ತೆಗೆದುಹಾಕಬೇಕೆಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ವಿವೇಕ್ ಡೆಬ್ರಾಯ್, ಕೃಷಿಕರ ಕೃಷಿ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಅವರಿಗೆ ಕೃಷಿಯೇತರ ಮೂಲಗಳಿಂದ ಬರುವ ಆದಾಯಕ್ಕೂ ವಿನಾಯಿತಿ ದೊರೆಯುತ್ತಿದೆ. ಆದ್ದರಿಂದ ನಗರ ಪ್ರದೇಶಗಳಲ್ಲಿ ವಿಧಿಸುವ ರೀತಿಯಲ್ಲೇ ಕೃಷಿಗೂ ತೆರಿಗೆ ವಿಧಿಸಬೇಕೆಂದು ಹೇಳಿದ್ದಾರೆ.
ನಗರ-ಗ್ರಾಮೀಣ ಎಂಬ ಕೃತಕ ವ್ಯತ್ಯಾಸಗಳನ್ನು ನಾನು ನಂಬುವುದಿಲ್ಲ. ನಗರ ಪ್ರದೇಶದಲ್ಲಿ ವೈಯಕ್ತಿಕ ಆದಾಯ ತೆರಿಗೆ ಏನಿರುತ್ತದೆಯೋ ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಆದಾಯ ತೆರಿಗೆ ಇರಬೇಕೆಂದು ವಿವೇಕ್ ಡೆಬ್ರಾಯ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ