ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾಂಸದ ತಿನಿಸುಗಳಿಗೆ ನಿಷೇಧ ಹೇರಿ: ಪ್ರಧಾನಿಗೆ ಪೇಟಾ ಒತ್ತಾಯ

ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಭೆಗಳಲ್ಲಿ ಮಾಂಸದ ಪದಾರ್ಥಗಳನ್ನು ನಿಷೇಧಿಸುವಂತೆ...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ: ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಭೆಗಳಲ್ಲಿ ಮಾಂಸದ ಪದಾರ್ಥಗಳನ್ನು ನಿಷೇಧಿಸುವಂತೆ ಪ್ರಾಣಿಗಳ ಅಭಿವೃದ್ಧಿ ಸಂಘಟನೆಯಾದ ಎಥಿಕಲ್ ಟ್ರೀಟ್ ಮೆಂಟ್ ಆಫ್ ಅನಿಮಲ್ಸ್(ಪೇಟಾ) ಪ್ರಧಾನ ಮಂತ್ರಿಯನ್ನು ಒತ್ತಾಯಿಸಿದೆ.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾಂಸದ ತಿನಿಸುಗಳನ್ನು ಪೂರೈಸುವುದನ್ನು ಇತ್ತೀಚೆಗೆ ಜರ್ಮನಿ ಸರ್ಕಾರದ ಪರಿಸರ ಖಾತೆ ಸಚಿವ ಬರ್ಬರಾ ಹೆಂಡ್ರಿಕ್ಸ್ ನಿಷೇಧಿಸಿ ಆದೇಶ ಹೊರಡಿಸಿದ್ದರು. ಇದೇ ರೀತಿ ಭಾರತದಲ್ಲಿ ಕೂಡ ನಿಷೇಧ ತರಬೇಕೆಂದು ಪೇಟಾ ಸಂಘಟನೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಮಾಂಸವನ್ನು ಹೆಚ್ಚು ಸೇವಿಸುವುದನ್ನು ಕಡಿಮೆ ಮಾಡಿದರೆ ಹಸಿರುಮನೆ ಅನಿಲ ತಡೆಯಬಹುದು ಮತ್ತು ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಪೇಟಾ ಪ್ರಧಾನಿಯವರಿಗೆ ಕೋರಿಕೆ ಮಾಡಿದೆ.
ಸಸ್ಯಾಹಾರಿಯಾದ ಮೋದಿಯವರು ಸಹಾನುಭೂತಿಯುಳ್ಳ, ಆರೋಗ್ಯಕರ ಮತ್ತು ಪರಿಸರ ಸ್ನೇಹಕ್ಕೆ ಮಾದರಿಯಾಗಿದ್ದಾರೆ. ಹೀಗಿರುವಾಗ ಮಾಂಸದಿಂದ ತಯಾರಿಸಿದ ಪದಾರ್ಥಗಳನ್ನು ವ್ಯರ್ಜ್ಯ ಮಾಡುವ ಮೂಲಕ ಸರ್ಕಾರ ಜನತೆಗೆ ಮಾದರಿಯಾಗಬೇಕು ಮತ್ತು ಪರಿಸರವನ್ನು ಸಂರಕ್ಷಿಸಬೇಕು ಎಂದು ಪೇಟಾ ಸಂಘಟನೆಯ ಸಾರ್ವಜನಿಕ ಯೋಜನೆಯ ಮುಂಚೂಣಿ ನಿಕುಂಜ್ ಶರ್ಮ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com