ಅತ್ಯಾಚಾರ ಪ್ರಕರಣ: ಪೋಸ್ಕೋ ಕೋರ್ಟ್ ನಿಂದ ಗಾಯತ್ರಿ ಪ್ರಜಾಪತಿಗೆ ಜಾಮೀನು

ಉತ್ತರ ಪ್ರದೇಶ ಮಾಜಿ ಸಚಿವ, ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪ ಎದುರಿಸುತ್ತಿರುವ ಗಾಯತ್ರಿ ಪ್ರಜಾಪತಿಗೆ ಪೋಸ್ಕೋ ನ್ಯಾಯಾಲಯ ಜಾಮೀನು ನೀಡಿದೆ.
ಎಸ್ ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಜೊತೆಗೆ ಆರೋಪಿ ಗಾಯತ್ರಿ ಪ್ರಜಾಪತಿ
ಎಸ್ ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಜೊತೆಗೆ ಆರೋಪಿ ಗಾಯತ್ರಿ ಪ್ರಜಾಪತಿ
ಲಖನೌ: ಉತ್ತರ ಪ್ರದೇಶ ಮಾಜಿ ಸಚಿವ, ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪ ಎದುರಿಸುತ್ತಿರುವ ಗಾಯತ್ರಿ ಪ್ರಜಾಪತಿಗೆ ಪೋಸ್ಕೋ ನ್ಯಾಯಾಲಯ ಜಾಮೀನು ನೀಡಿದೆ. 
ಪೋಸ್ಕೋ ನ್ಯಾಯಾಲಯದ ನ್ಯಾ. ಓಂ ಪ್ರಕಾಶ್ ಮಿಶ್ರಾ ಗಾಯತ್ರಿ ಪ್ರಜಾಪತಿ, ವಿಕಾಸ್ ವರ್ಮಾ ಹಾಗೂ ಅಮರೇಂದ್ರ ಸಿಂಗ್ ಅಲಿಯಾಸ್ ಮಿಂಟು ಗೆ 
ಜಾಮೀನು ಮಂಜೂರು ಮಾಡಿದ್ದಾರೆ. 
ಆರೋಪಿಗಳಿಗೆ ತಲಾ 1 ಲಕ್ಷ ರೂಪಾಯಿ ಶೂರಿಟಿ ನೀಡುವಂತೆ ಸೂಚಿಸಿದ್ದು, ಅಷ್ಟೇ ಮೊತ್ತದ ವೈಯಕ್ತಿಕ ಬಾಂಡ್ ನ್ನು ಸಹ ನ್ಯಾಯಾಲಯಕ್ಕೆ ನೀಡಬೇಕು ಎಂದು ಸೂಚನೆ ನೀಡಿದೆ.ಸುಪ್ರೀಂ ಕೋರ್ಟ್ ನ ನಿರ್ದೇಶನದ ಅನುಸಾರವಾಗಿ ಉತ್ತರ ಪ್ರದೇಶ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. 
ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಆ ಮಹಿಳೆಯ ಅಪ್ರಾಪ್ತ ಮಗಳ ಮೇಲೂ ಸಹ ಅತ್ಯಾಚಾರ ನಡೆಸಲು ಯತ್ನಿಸಿದ್ದ ಆರೋಪದಡಿ ಪ್ರಜಾಪತಿಯನ್ನು ಮಾ.15 ರಂದು ಬಂಧಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com