ಕೃಷಿ ಆದಾಯದ ಮೇಲೆ ತೆರಿಗೆ ವಿಧಿಸುವ ಯೋಚನೆ ಸರ್ಕಾರಕ್ಕಿಲ್ಲ: ಅರುಣ್ ಜೈಟ್ಲಿ

ಕೃಷಿ ಮೂಲದ ಆದಾಯದ ಮೇಲೆ ತೆರಿಗೆ ವಿಧಿಸುವಂತಹ ಯಾವ ಯೋಚನೆಗಳು ಸರ್ಕಾರಕ್ಕಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ...
ಅರುಣ್ ಜೈಟ್ಲಿ
ಅರುಣ್ ಜೈಟ್ಲಿ
ನವದೆಹಲಿ: ಕೃಷಿ ಮೂಲದ ಆದಾಯದ ಮೇಲೆ ತೆರಿಗೆ ವಿಧಿಸುವಂತಹ ಯಾವ ಯೋಚನೆಗಳು ಸರ್ಕಾರಕ್ಕಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಸ್ಪಷ್ಟಪಡಿಸಿದ್ದಾರೆ.
ತೆರಿಗೆ ಮೂಲವನ್ನು ವಿಸ್ತರಿಸಬೇಕಾಗಿರುವ ಹಿನ್ನೆಲೆಯಲ್ಲಿ  ಕೃಷಿ ಆದಾಯಕ್ಕೂ ಸಹ ತೆರಿಗೆ ವಿಧಿಸಬೇಕಿದೆ ಎಂದು  ನೀತಿ ಆಯೋಗದ ಸದಸ್ಯ ಹಾಗೂ ಅರ್ಥ ಶಾಸ್ತ್ರಜ್ಞ ಬೈಬಕ್ ಡೆಬ್ರಾಯ್ ಅಭಿಪ್ರಾಯಪಟ್ಟಿದ್ದರು. ಈ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಜೈಟ್ಲಿ, ಕೃಷಿ ಆದಾಯಕ್ಕೆ ತೆರಿಗೆ ವಿಧಿಸುವ ಸಂವಿಧಾನಿಕ ಹಕ್ಕು ಕೇಂದ್ರ ಸರ್ಕಾರಕ್ಕಿಲ್ಲ ಎಂದು ಹೇಳಿದ್ದಾರೆ.
ಕೃಷಿಕರ ಕೃಷಿ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಅವರಿಗೆ ಕೃಷಿಯೇತರ ಮೂಲಗಳಿಂದ ಬರುವ ಆದಾಯಕ್ಕೂ ವಿನಾಯಿತಿ ದೊರೆಯುತ್ತಿದೆ. ಆದ್ದರಿಂದ ನಗರ ಪ್ರದೇಶಗಳಲ್ಲಿ ವಿಧಿಸುವ ರೀತಿಯಲ್ಲೇ ಕೃಷಿಗೂ ತೆರಿಗೆ ವಿಧಿಸಬೇಕೆಂದು ಹೇಳಿದ್ದ ಡೆಬ್ರಾಯ್ ನಗರ-ಗ್ರಾಮೀಣ ಎಂಬ ಕೃತಕ ವ್ಯತ್ಯಾಸಗಳನ್ನು ನಾನು ನಂಬುವುದಿಲ್ಲ. ನಗರ ಪ್ರದೇಶದಲ್ಲಿ ವೈಯಕ್ತಿಕ ಆದಾಯ ತೆರಿಗೆ ಏನಿರುತ್ತದೆಯೋ ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಆದಾಯ ತೆರಿಗೆ ಇರಬೇಕೆಂದು  ಡೆಬ್ರಾಯ್ ನಿನ್ನೆ ಸಲಹೆ ನೀಡಿದ್ದರು.
ಮಾರ್ಚ್ 22 ರಂದು ನಡೆದ ಸಂಸತ್ ಅಧಿವೇಶನದಲ್ಲಿ ಕೃಷಿ ಆದಾಯದ ಮೇಲೆ ತೆರಿಗೆ ವಿಧಿಸಿಲ್ಲ ಮುಂದೆಯೂ ವಿಧಿಸುವುದಿಲ್ಲ ಎಂದು ಅರುಣ್ ಜೈಟ್ಲಿ ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com