ಸಾಮಾನ್ಯ ಜನರೂ ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು: ಪ್ರಧಾನಿ ಮೋದಿ

ಅಭಿವೃದ್ಧಿಯ ಒಂದು ಭಾಗವಾಗಿ ವಾಯು ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ...
ನರೇಂದ್ರ ಮೋದಿ
ನರೇಂದ್ರ ಮೋದಿ
ಶಿಮ್ಲಾ: ಅಭಿವೃದ್ಧಿಯ ಒಂದು ಭಾಗವಾಗಿ ವಾಯು ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.
ಇಂದು ಶಿಮ್ಲಾದಲ್ಲಿ ಸಾಮಾನ್ಯ ಜನರಿಗೂ ಕಡಿಮೆ ದರದಲ್ಲಿ ವಿಮಾನ ಯಾನ ಸೌಲಭ್ಯ ಕಲ್ಪಿಸುವ ಕೇಂದ್ರ ಸರ್ಕಾರದ ಮಹತ್ವದ ಉಡಾನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ಹವಾಯಿ ಚಪ್ಪಲ್ ಧರಿಸುವ ಸಾಮಾನ್ಯ ವ್ಯಕ್ತಿಗಳು ಸಹ ವಿಮಾನದಲ್ಲಿ ಪ್ರಯಾಣಿಸುಬೇಕು ಎಂಬುದು ನಮ್ಮ ಉದ್ದೇಶ ಎಂದರು.
ನವದೆಹಲಿ-ಶಿಮ್ಲಾ ನಡುವಿನ ಪ್ರಪ್ರಥಮ ಉಡಾನ್ ವಿಮಾನ ಹಾರಾಟಕ್ಕೆ ಮೋದಿ ಹಸಿರು ನಿಶಾನೆ ತೋರಿದರು. ಇದೇ ಸಂದರ್ಭದಲ್ಲಿ ಕಡಪಾ-ಹೈದರಾಬಾದ್ ಮತ್ತು ನಾಂದೇಡ್-ಹೈದರಾಬಾದ್ ಉಡಾನ್ ಹಾರಾಟಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. 
ಪ್ರಾದೇಶಿಕವಾಗಿ ವಾಯು ಸಂಪರ್ಕ ಕಲ್ಪಿಸುವ ಉಡಾನ್ ಯೋಜನೆ ಅಡಿಯಲ್ಲಿ ಒಂದು ಸೀಟಿಗೆ, ಒಂದು ಗಂಟೆ ಪ್ರಯಾಣಕ್ಕೆ 2,500 ದರ ನಿಗದಿಪಡಿಸಲಾಗಿದೆ. 
ಉಡಾನ್ ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ರಾಜ್ಯಪಾಲ ಆಚಾರ್ಯ ದೇವವ್ರತ, ಮುಖ್ಯಮಂತ್ರಿ ವೀರಭದ್ರ ಸಿಂಗ್, ಕೇಂದ್ರ ಸಚಿವರಾದ ಪಿ ಅಶೋಕ್ ಗಜಪತಿ ಆಜು, ಜಯಂತ್ ಸಿನ್ಹಾ ಉಪಸ್ಥಿತರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com