ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ಪತಿ ವಾದ್ರಾ ಹಣಕಾಸಿನ ವ್ಯವಹಾರಗಳಿಗೂ ನನಗೂ ಸಂಬಂಧವಿಲ್ಲ: ಪ್ರಿಯಾಂಕಾ ಗಾಂಧಿ

ಪತಿ ರಾಬರ್ಟ್ ವಾದ್ರಾ ಹಣಕಾಸು ವ್ಯವಹಾರ ಹಾಗೂ ಸ್ಕೈಲೈಟ್ ಹಾಸ್ಟಿಟಾಲಿಟಿ ಕಂಪನಿಯ ವ್ಯವಹಾರಗಳಿಗೂ ನನಗೂ ಸಂಬಂಧವಿಲ್ಲ ಎಂದು ಪ್ರಿಯಾಂಕಾ ...
Published on
ನವದೆಹಲಿ: ಪತಿ ರಾಬರ್ಟ್ ವಾದ್ರಾ ಹಣಕಾಸು ವ್ಯವಹಾರ ಹಾಗೂ ಸ್ಕೈಲೈಟ್ ಹಾಸ್ಟಿಟಾಲಿಟಿ ಕಂಪನಿಯ ವ್ಯವಹಾರಗಳಿಗೂ ನನಗೂ ಸಂಬಂಧವಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪಷ್ಟಪಡಿಸಿದ್ದಾರೆ.
ಡಿಎಲ್ ಎಫ್ ಲ್ಯಾಂಡ್ ಡೀಲ್ ಸಂಬಂಧ ಹರ್ಯಾಣ ಸರ್ಕಾರ ತನಿಖೆ ನಡೆಸುತ್ತಿದೆ.ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಕಚೇರಿ ಸ್ಪಷ್ಟನೆ ನೀಡಿದೆ. ರಾಬರ್ಟ್ ವಾದ್ರಾ ಡಿಎಲ್ ಎಫ್ ನಿಂದ ಪಡೆದ ಹಣವನ್ನು ಪತ್ನಿ ಪ್ರಿಯಾಂಕಾ ಹರ್ಯಾಣದ ಫರೀದಾಬಾದ್ ನಲ್ಲಿ ಜಮಾನು ಕೊಂಡಕೊಳ್ಳಲು ಉಪಯೋಗಿಸಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.
ಫರೀದಾಬಾದ್ ಜಿಲ್ಲೆಯ ಅಮಿಪುರ್ ನಲ್ಲಿ ಪ್ರಿಯಾಂಕಾ ಗಾಂಧಿ 2006 ರ  ಏಪ್ರಿಲ್ 28 ರಂದು 15 ಲಕ್ಷ ರು ಬೆಲೆಗೆ  5 ಎಕರೆ ಕೃಷಿ ಭೂಮಿ ಖರೀದಿಸಿದ್ದರು. 4 ವರ್ಷದ ನಂತರ ಅಂದರೆ 2010 ಫೆಬ್ರವರಿ 17 ರಂದು ಭೂಮಿಯ ಮೂಲ ಮಾಲೀಕನಿಗೆ  80 ಲಕ್ಷ ರುಪಾಯಿ ಮಾರುಕಟ್ಟೆ ಬೆಲೆಗೆ ಮರು ಮಾರಾಟ ಮಾಡಲಾಗಿತ್ತು. ಈ ಹಣವನ್ನು ಚೆಕ್ ಮೂಲಕ ನೀಡಲಾಗಿತ್ತು.
ತಮ್ಮ ಅಜ್ಜಿ ಇಂದಿರಾಗಾಂಧಿ ಅವರಿಂದ ವಂಶಪಾರಂಪರ್ಯವಾಗಿ ಬಂದಿರುವ ಆಸ್ತಿಯ ಬಾಡಿಗೆ ಆದಾಯದಿಂದ ತಾವು ಈ ಜಮೀನು ಖರೀದಿಸಿರುವುದಾಗಿ ಪ್ರಿಯಾಂಕಾ ತಿಳಿಸಿದ್ದಾರೆ.
ರಾಬರ್ಟ್ ವಾದ್ರಾ ಅವರ ಹಣಕಾಸು ವ್ಯವಹಾರ, ಸ್ಕೈ ಲೈಟ್ ಹಾಸ್ಪಿಟಾಲಿಟಿ, ಡಿಎಲ್ ಎಫ್ ವ್ಯವಹಾರಗಳಿಗೆ ಪ್ರಿಯಾಂಕಾ ಗಾಂಧಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಮಾಧ್ಯಮ ಮಾಡಿರುವ ವರದಿ, ತಪ್ಪಾಗಿದ್ದು, ಆಧಾರರಹಿತ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಆಕೆಯ ಗೌರವವನ್ನು ಹಾಳು ಮಾಡಲು ಕುತಂತ್ರ ಮಾಡಲಾಗಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com