'ಹಲೋ, ನಾನು ಐಎಸ್ಐ ಏಜೆಂಟ್, ಆದರೆ ಆ ಕೆಲಸ ಮುಂದುವರಿಸಲು ನನಗೆ ಇಷ್ಟವಿಲ್ಲ'

ಹಲೋ, ನಾನು ಐಎಸ್ಐ ಏಜೆಂಟ್, ಆದರೆ ನನಗೆ ಭಾರತದಲ್ಲಿ ಆ ಕೆಲಸ ಮುಂದುವರಿಸಲು ನನಗೆ ಇಷ್ಟವಿಲ್ಲ ' ಎಂದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಹಲೋ, ನಾನು ಐಎಸ್ಐ ಏಜೆಂಟ್, ಆದರೆ ನನಗೆ ಭಾರತದಲ್ಲಿ ಆ ಕೆಲಸ ಮುಂದುವರಿಸಲು ನನಗೆ ಇಷ್ಟವಿಲ್ಲ '  ಎಂದು ಪರಿಚಯಿಸಿಕೊಂಡ ಪಾಕಿಸ್ತಾನದ ಪ್ರಜೆಯೊಬ್ಬರನ್ನು ಗುಪ್ತಚರ ಸಂಸ್ಥೆ ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದೆ.
ದುಬೈನಿಂದ ಏರ್‌ ಇಂಡಿಯಾ ವಿಮಾನದಲ್ಲಿ, ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಮುಹಮ್ಮದ್ ಅಹ್ಮದ್ ಶೇಕ್ ಮುಹಮ್ಮದ್ ರಫೀಕ್ ಬಂಧಿತ ವ್ಯಕ್ತಿ ಎಂದು ಮೂಲಗಳು ತಿಳಿಸಿವೆ. ರಫೀಕ್‌, ದೆಹಲಿಯಿಂದ ನೇಪಾಳದ ಕಠ್ಮಂಡುಗೆ ತೆರಳಲು ಟಿಕೆಟ್ ಖರೀದಿಸಿದ್ದರು. ಆದರೆ ದೆಹಲಿಯಲ್ಲಿ ಇಳಿದ ನಂತರ ತಮ್ಮ ಪ್ರಯಾಣವನ್ನು ಮೊಟಕುಗೊಳಿಸಲು ನಿರ್ಧರಿಸಿದ್ದಾರೆ.
ಆನಂತರ ವಿಮಾನ ನಿಲ್ದಾಣದ ಸಹಾಯ ಕೇಂದ್ರಕ್ಕೆ ತೆರಳಿ, ‘ಹಲೋ, ನಾನು ಐಎಸ್ಐ ಏಜೆಂಟ್. ಆ ಕೆಲಸ ಮುಂದುವರಿಸಲು ನನಗೆ ಇಷ್ಟವಿಲ್ಲ. ಇನ್ನು ಮುಂದೆ ಭಾರತದಲ್ಲೇ ಇರಲು ಬಯಸುತ್ತೇನೆ. ಜತೆಗೆ ಐಎಸ್‌ಐ ಬಗೆಗಿನ ಮಾಹಿತಿ ನೀಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ. ವಿಷಯ ತಿಳಿಯುತ್ತಲೇ, ಸಹಾಯಕ ಕೇಂದ್ರದ ಸಿಬ್ಬಂದಿ ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ರಫೀಕ್‌ ಅವರನ್ನು ಗುಪ್ತಚರ ಇಲಾಖೆ ಸಿಬ್ಬಂದಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com