ಸಾಂದರ್ಭಿಕ ಚಿತ್ರ
ದೇಶ
ದೆಹಲಿ ಕೋರ್ಟ್ ಹೊರಗಡೆ ವಿಚಾರಣಾಧೀನ ಕೈದಿಗೆ ಗುಂಡಿಕ್ಕಿ ಹತ್ಯೆ
ಕೊಲೆ ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ವ್ಯಕ್ತಿಯನ್ನು ಶನಿವಾರ ದೆಹಲಿಯ ರೋಹಿಣಿ ಜಿಲ್ಲಾ ಕೋರ್ಟ್ ಹೊರಗಡೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ....
ನವದೆಹಲಿ: ಕೊಲೆ ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ವ್ಯಕ್ತಿಯನ್ನು ಶನಿವಾರ ದೆಹಲಿಯ ರೋಹಿಣಿ ಜಿಲ್ಲಾ ಕೋರ್ಟ್ ಹೊರಗಡೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಕಳೆದ ಡಿಸೆಂಬರ್ 2016ರಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಶ್ ಎಂಬುವವರನ್ನು ಹರಿಯಾಣ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯನ್ನು ಇಂದು ವಿಚಾರಣೆಗಾಗಿ ರೋಹಿಣಿ ಕೋರ್ಟ್ ಗೆ ಕರೆತರಲಾಗಿತ್ತು. ಈ ವೇಳೆ ದುಷ್ಕರ್ಮಿಯೊಬ್ಬ ರಾಜೇಶ್ ಮೇಲೆ ಗುಂಡು ಹಾರಿಸಿದ್ದು, ವಿಚಾರಣಾಧೀನ ಕೈದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುಂಡು ಹಾರಿಸಿದ ವ್ಯಕ್ತಿ ಹರಿಯಾಣದ ಜಜ್ಜರ್ ಜಿಲ್ಲೆಯ ಮೊಹಿತ್ ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ರಿಶಿ ಪಾಲ್ ಅವರು ತಿಳಿಸಿದ್ದಾರೆ.
ಮೊಹಿತ್ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

