ಕೊಲ್ಕೊತಾ: ಕಾನೂನು ಕಾಲೇಜಿನ ಮೂರನೇ ಸೆಮಿಸ್ಟರ್ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಹಿಂದಿ ಪ್ರೇಮ ಗೀತೆಗಳು, ಬೆಂಗಾಳಿ ಸಿನಿಮಾ ಮತ್ತು ಪದ್ಯಗಳನ್ನು ಬರೆದ 10 ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಸಸ್ಪೆಂಡ್ ಮಾಡಿದೆ.
ಕೊಲ್ಕೊತಾದ ಮಾಲ್ಡಾದ ಬಲ್ಗೂರ್ ಘಾಟ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ, ಅವರು ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳು, ಅವರು ತಪ್ಪು ಉತ್ತರ ಬರೆಯಬಹುದಿತ್ತು, ಅದರ ಬದಲು ಕೆಟ್ಟ ಪದಗಳು, ಪ್ರೇಮ ಗೀತೆಗಳು ಹಾಗೂ ಸಿನಿಮಾ ಹಾಡುಗಳನ್ನು ಬರೆಯಲಾಗಿದೆ,
ಪ್ರಕರಣದ ತನಿಖೆಗಾಗಿ ಸತ್ಯಶೋಧನೆ ಸಮಿತಿ ರಚಿಸಲಾಗಿದ್ದು, ಕಳೆದ ಎರಡು ವರ್ಷಗಳಿಂದ ಹಲವು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ ಎಂದು ಸನಾತನ್ ದಾಸ್ ಹೇಳಿದ್ದಾರೆ. ಅಮಾನತು ಮಾಡಿರುವ ವಿದ್ಯಾರ್ಥಿಗಳ ವಿರುದ್ಧ 1 ವರ್ಷ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.