ನಿವೃತ್ತ ಕರ್ನಲ್ ಮನೆ ಮೇಲೆ ದಾಳಿ: 1ಕೋಟಿ ನಗದು,40 ರೈಫಲ್, 50 ಸಾವಿರ ಮದ್ದುಗುಂಡು ವಶ

ನಿವೃತ್ತ ಕರ್ನಲ್ ಮನೆ ಮೇಲೆ ದಾಳಿ ನಡೆಸಿದ ಕಂದಾಯ ಗುಪ್ತಚರ ಮಹಾ ನಿರ್ದೇಶನಾಲಯ(ಡಿಆರ್‍ಐ) ಭಾರೀ ಪ್ರಮಾಣದ ಆಯುಧಗಳನ್ನು
ದೇವೇಂದ್ರ  ಸಿಂಗ್
ದೇವೇಂದ್ರ ಸಿಂಗ್
ಮೀರತ್(ಯುಪಿ): ನಿವೃತ್ತ ಕರ್ನಲ್ ಮನೆ ಮೇಲೆ ದಾಳಿ ನಡೆಸಿದ ಕಂದಾಯ ಗುಪ್ತಚರ ಮಹಾ ನಿರ್ದೇಶನಾಲಯ(ಡಿಆರ್‍ಐ) ಭಾರೀ ಪ್ರಮಾಣದ ಆಯುಧಗಳನ್ನು ವಶಪಡಿಸಿಕೊಂಡಿದೆ.
ಉತ್ತರಪ್ರದೇಶದ ಮೀರತ್ ನಲ್ಲಿರುವ ನಿವೃತ್ತ ಕರ್ನಲ್ ದೇವೇಂದ್ರ ಸಿಂಗ್ ನಿವಾಸದ ಮೇಲೆ ಡಿಆರ್‍ಐ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿ ವೇಳೆ 40 ರೈಫಲ್, 50 ಸಾವಿರ ಮದ್ದುಗುಂಡುಗಳು, ಪಿಸ್ತೂಲ್, 1 ಕೋಟಿ ರೂ. ನಗದು ಹಣ ಸಿಕ್ಕಿದೆ.ಸತತ 16 ಗಂಟೆಗಳ ಪರಿಶೀಲನೆಯಲ್ಲಿ ಕಂಟೈನರ್‍ನಲ್ಲಿ ತುಂಬಿದ್ದ 117 ಕೆಜಿ ಮಾಂಸ, ಪ್ರಾಣಿಗಳ ತಲೆಬುರಡೆಗಳು, ಕೊಂಬುಗಳು, ಚರ್ಮಗಳು ಸಿಕ್ಕಿವೆ.
ಬೆಳಗ್ಗೆ ದಾಳಿ ನಡೆಸಿದ್ದು, ಈ ವೇಳೆ ವಿದೇಶಿ ರೈಫಲ್ ಗಳು ಸಿಕ್ಕಿದೆ. ಈ ರೈಫಲ್‍ಗಳಿಗೆ ಯಾವುದೇ ಲೈಸನ್ಸ್ ಇಲ್ಲ. ಇದೇ ವೇಳೆ ಮಗನಾಗಿರುವ ರಾಷ್ಟ್ರಮಟ್ಟದ ಶೂಟರ್ ಪ್ರಶಾಂತ್ ಬಿಶ್ನೋಯಿ ಬಗ್ಗೆ ವಿಚಾರಿಸಿದ್ದು, ದೇವೇಂದ್ರ ಸಿಂಗ್ ಯಾವುದೇ ಮಾಹಿತಿ ನೀಡಿಲ್ಲ. ಆತ ದಾಳಿ ನಡೆದ ಬಳಿಕ ನಾಪತ್ತೆಯಾಗಿದ್ದಾನೆ .ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿಲ್ಲ. ಮನೆಯ ಮುಂದೆ ಪೊಲೀಸ್ ಪಡೆ ನಿಯೋಜಿಸಲಾಗಿದೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com