ಬೆಂಗಳೂರು: ಐಟಿ ಉದ್ಯೋಗ ಬಿಕ್ಕಟ್ಟು, ಹೊಸದಾಗಿ ನೇಮಕಗೊಂಡ ವಿದ್ಯಾರ್ಥಿಗಳಿಗೆ ತಟ್ಟಿದ ಬಿಸಿ

ಮಾಹಿತಿ ತಂತ್ರಜ್ಞಾನ ಉದ್ಯೋಗ ವಲಯದಲ್ಲಿನ ಬಿಕ್ಕಟ್ಟು ಬಿಸಿ ಕೇವಲ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವವರಿಗೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಾಹಿತಿ ತಂತ್ರಜ್ಞಾನ ಉದ್ಯೋಗ ವಲಯದಲ್ಲಿನ ಬಿಕ್ಕಟ್ಟು ಬಿಸಿ ಕೇವಲ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರವಲ್ಲದೆ ಎಂಜಿನಿಯರಿಂಗ್ ಕ್ಯಾಂಪಸ್ ನಿಯೋಜನೆಯಲ್ಲಿ  ಆಯ್ಕೆಯಾದ ಕಂಪೆನಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಲು ಮುಂದಾಗಿರುವ ವಿದ್ಯಾರ್ಥಿಗಳಿಗೆ ಸಹ ತಟ್ಟಿದೆ.
ಕ್ಯಾಂಪಸ್ ನಿಯೋಜನೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಂಡ ಕೆಲವು ಕಂಪೆನಿಗಳು ಸೇರುವ ದಿನಾಂಕವ ನ್ನು ಮುಂದೂಡಿವೆ. ಇನ್ನು ಕೆಲವು ಕಂಪೆನಿಗಳು ನಿಯೋಜನೆಯಾದ ನಂತರ ತಿರಸ್ಕರಿಸಿವೆ.
ಬೆಂಗಳೂರಿನಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಐಟಿ ಕಂಪೆನಿಗಳಿಂದ ಉದ್ಯೋಗದ ಕೊಡುಗೆ ಪಡೆದ ಅಭ್ಯರ್ಥಿಗಳಿಗೆ ಕೆಲಸಕ್ಕೆ ಸೇರಲು ದಿನಾಂಕವನ್ನು ನೀಡಲು ಪ್ರತಿಷ್ಟಿತ ಮತ್ತು ಸಣ್ಣ ಐಟಿ ಕಂಪೆನಿಗಳು ಅಸಹಾಯಕವಾಗಿವೆ. ವಿದ್ಯಾರ್ಥಿಗಳು ಇದೀಗ ನೇಮಕಾತಿ ಕಚೇರಿಗಳಿಗೆ ಹೋಗಿ ವಿಚಾರಿಸುತ್ತಿದ್ದಾರೆ.
ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ನೇಮಕಾತಿ ಅಧಿಕಾರಿ ಪ್ರೊ. ರವಿಶಂಕರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿ, ಕಂಪೆನಿಗಳ ಕಡೆಯಿಂದ ಕೆಲಸಕ್ಕೆ ಸೇರಲು ಸ್ಪಷ್ಟ ದಿನಾಂಕದ ಮಾಹಿತಿ ಸಿಕ್ಕಿಲ್ಲ.ಹಾಗಾಗಿ ಇದೀಗ ಎಂಜಿನಿಯರಿಂಗ್ ಮುಗಿಸಿರುವ ವಿದ್ಯಾರ್ಥಿಗಳು ನಮ್ಮಲ್ಲಿಗೆ ಬರುತ್ತಿದ್ದಾರೆ. ನಾವೀಗ ವಿದ್ಯಾರ್ಥಿಗಳಿಗೆ ಉತ್ತರ ನೀಡಬೇಕಾಗಿದೆ ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com