ನವದೆಹಲಿ: ತತ್ಕಾಲ್ ಟಿಕೆಟ್ ನ್ನು ಮೊದಲು ಕಾಯ್ದಿರಿಸಿ ಆ ನಂತರ ಹಣ ಪಾವತಿ ಮಾಡುವ ಸೌಲಭ್ಯವನ್ನು ರೈಲ್ವೆ ಇಲಾಖೆ ಜಾರಿಗೊಳಿಸಿದೆ.
ಐಆರ್ ಸಿಟಿಸಿಯ ಮೂಲಕ ಪ್ರಯಾಣಿಕರು ಮೊದಲು ಟೀಕೆಟ್ ಕಾಯ್ದಿರಿಸಿ ಆ ನಂತರ ಹಣ ಪಾವತಿ ಮಾಡಬಹುದಾಗಿದೆ. ಇದಕ್ಕೂ ಮುನ್ನ ಸಾಮಾನ್ಯ ಟಿಕೆಟ್ ಗಳನ್ನು ಕಾಯ್ದಿರಿಸಲು ಮಾತ್ರ ಈ ಸೌಲಭ್ಯ ಲಭ್ಯವಿತ್ತು. ಈಗ ತತ್ಕಾಲ್ ಟಿಕೆಟ್ ರಿಸರ್ವೇಷನ್ ಗೂ ಸಹ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ಮನೆ ಬಾಗಿಲಿಗೆ ಬರುವ ಟಿಕೆಟ್ ಪಡೆದು ಆ ನಂತರ ಡೆಬಿಟ್, ಕ್ರೆಡಿಟ್, ಕ್ಯಾಶ್ ಮೂಲಕ ಟಿಕೆಟ್ ಮೊತ್ತವನ್ನು ಪಾವತಿ ಮಾಡಬಹುದಾಗಿದೆ ಎಂದು ಐಆರ್ ಸಿಟಿಸಿ ಪೇಮೆಂಟ್ ಪ್ರೊವೈಡರ್ ಹೇಳಿದೆ.