ಹರಿಯಾಣದ ಶಾಲೆಯೊಂದರಲ್ಲಿ ಹಿಂದು ಮಕ್ಕಳಿಗೆ ಬಲವಂತವಾಗಿ ಕುರಾನ್ ಪಠಣ, ನಮಾಜ್ ಮಾಡಿಸಲಾಗುತ್ತಿದೆ!

ಶಿಕ್ಷಕರು ತಮಗೆ ಕುರಾನ್ ಪಠಣ, ನಮಾಜ್ ಮಾಡುವಂತೆ ಬಲವಂತ ಮಾಡುತ್ತಿದ್ದಾರೆ ಎಂದು ಹರಿಯಾಣದ ಶಾಲೆಯೊಂದರ ಹಿಂದು ವಿದ್ಯಾರ್ಥಿಗಳು...
ನಮಾಜ್
ನಮಾಜ್
ಮೆವಾತ್: ಶಿಕ್ಷಕರು ತಮಗೆ ಕುರಾನ್ ಪಠಣ, ನಮಾಜ್ ಮಾಡುವಂತೆ ಬಲವಂತ ಮಾಡುತ್ತಿದ್ದಾರೆ ಎಂದು ಹರಿಯಾಣದ ಶಾಲೆಯೊಂದರ ಹಿಂದು ವಿದ್ಯಾರ್ಥಿಗಳು ಆರೋಪಿಸಿದ್ದು ಇದೀಗ ಆತಂಕಕ್ಕೆ ಕಾರಣವಾಗಿದೆ. 
ಮೇವಾತ್ ಮಾಡೆಲ್ ಪಬ್ಲಿಕ್ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ವಿದ್ಯಾರ್ಥಿಗಳಿಗೆ ಕುರಾನ್ ಓದುವಂತೆ, ದಿನಂ ಪ್ರತಿ ನವಾಜ್ ಮಾಡಲು ಜತೆಗೆ ಇಸ್ಲಾಂಗೆ ಮತಾಂತರಗೊಳ್ಳುವಂತೆ  ಬಲವಂತ ಮಾಡಿದ್ದು ಅಲ್ಲದೆ ಥಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 
ಶಾಲೆಯ ಮೂವರು ಶಿಕ್ಷಕರು ವಿದ್ಯಾರ್ಥಿಗಳಿಗೆ ಇಸ್ಲಾಂ ಬೋಧನೆಗೆ ಮುಂದಾಗಿದ್ದು ಹಿಂಸೆ ನೀಡಿದ್ದಾರೆ ಎಂಬ ಆರೋಪ ಹಿನ್ನಲೆ ಈಗಾಗಲೇ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದ್ದು ಇನ್ನೊರ್ವ ಶಿಕ್ಷಕನನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಕುರಿತಂತೆ ಹರಿಯಾಣ ಸರ್ಕಾರ ಆಡಳಿತಾತ್ಮಕ ತನಿಖೆ ನಡೆಸಲು ಆದೇಶ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com