ಬಿಜೆಪಿ ಮಾದರಿಯಲ್ಲಿ ಕಾಂಗ್ರೆಸ್ ನಿಂದಲೂ ಟ್ವಿಟರ್ ಕ್ವಿಜ್: ಟ್ವೀಟಿಗರಿಂದ ಟ್ರೋಲ್

ಟ್ವಿಟರ್ ನಲ್ಲಿ ಸರ್ಕಾರದ ಯೋಜನೆಗಳು, ಸರ್ಕಾರಿ ಕ್ರಮಗಳ ಬಗ್ಗೆ '#KnowYourGovt' ಕ್ವಿಜ್ ನಡೆಸುತ್ತಿದ್ದ ಬಿಜೆಪಿಯ ಮಾದರಿಯಲ್ಲಿ ಕಾಂಗ್ರೆಸ್ ಸಹ '#KnowYourLegacy' ಹೆಸರಿನ ಕ್ವಿಜ್ ನಡೆಸಲು ಪ್ರಾರಂಭಿಸಿದೆ.
ಕಾಂಗ್ರೆಸ್
ಕಾಂಗ್ರೆಸ್
ನವದೆಹಲಿ: ಟ್ವಿಟರ್ ನಲ್ಲಿ ಸರ್ಕಾರದ ಯೋಜನೆಗಳು, ಸರ್ಕಾರಿ ಕ್ರಮಗಳ ಬಗ್ಗೆ '#KnowYourGovt' ಕ್ವಿಜ್ ನಡೆಸುತ್ತಿದ್ದ ಬಿಜೆಪಿಯ ಮಾದರಿಯಲ್ಲಿ ಕಾಂಗ್ರೆಸ್ ಸಹ '#KnowYourLegacy' ಹೆಸರಿನ ಕ್ವಿಜ್ ನಡೆಸಲು ಪ್ರಾರಂಭಿಸಿದೆ. ಆದರೆ ಕಾಂಗ್ರೆಸ್ ನ ತಂತ್ರ ತಿರುಗುಬಾಣವಾಗಿದ್ದು, ಟ್ವೀಟಿಗರು ಐತಿಹಾಸಿಕ ಪಕ್ಷವನ್ನು ಟ್ರೋಲ್ ಮಾಡಿದ್ದಾರೆ.
ಬಿಜೆಪಿಗೆ ಪ್ರತಿಯಾಗಿ ಕಾಂಗ್ರೆಸ್ ಟ್ವೀಟರ್ ನಲ್ಲಿ '#KnowYourLegacy ಕ್ವಿಜ್ ಪ್ರಾರಂಭಿಸಿ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸ್ವಾತಂತ್ರ್ಯ ಚಳುವಳಿಯ ಕುರಿತು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿತ್ತು.  ಅಷ್ಟೇ ಅಲ್ಲದೇ ಕಾಂಗ್ರೆಸ್ ಗೂ ಸ್ವಾತಂತ್ರ್ಯ ಹೋರಾಟಕ್ಕೂ ಇರುವ ಸಂಬಂಧವನ್ನು ಈ ಮೂಲಕ ತಿಳಿಸಲು ಯತ್ನಿಸಿತ್ತು. ಆದರೆ ಕಾಂಗ್ರೆಸ್ ನ್ನು ಗೇಲಿ ಮಾಡುವ ರೀತಿಯಲ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

blockquote class="twitter-tweet" data-lang="en">

कांग्रेस मुक्त भारत का नारा किसने दिया? Options ⬇
1.narendra Modi
2.narendra Modi
3.narendra Modi
4.narendra Modi

— rajdev (@rajdevjaiswal) August 3, 2017
ಕ್ವಿಟ್ ಇಂಡಿಯಾ ಘೋಷಣೆಯನ್ನು ಮೊದಲು ಪರಿಚಯಿಸಿದವರು ಯಾರು ಎಂಬ ಪ್ರಶ್ನೆ ಕೇಳಿರುವ ಕಾಂಗ್ರೆಸ್ ಪಕ್ಷದ ಟ್ವೀಟ್ ಖಾತೆಯನ್ನು ಟ್ರೋಲ್ ಮಾಡಿರುವ ಕಾಂಗ್ರೆಸ್ ಮುಕ್ತ ಭಾರತ ಘೋಷಣೆ ಮೊದಲು ಯಾರು ಪರಿಚಯಿಸಿದ್ದು ಎಂದು ಪ್ರಶ್ನೆ ಕೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com