2 ಪ್ಯಾನ್ ಕಾರ್ಡ್ ಹೊಂದಿರುವ ಅಜಂ ಖಾನ್ ಪುತ್ರನ ವಿರುದ್ಧ ತನಿಖೆಗೆ ಚುನಾವಣಾ ಆಯೋಗ ಆದೇಶ

ಎರಡು ಪ್ಯಾನ್ ಕಾರ್ಡ್ ಹೊಂದಿರುವ ಆರೋಪದ ಮೇಲೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಪುತ್ರ ಅಬ್ದುಲ್ಲಾ ಅಜಂ ಖಾನ್ ವಿರುದ್ಧ ತನಿಖೆ...
ಅಬ್ದುಲ್ಲಾ ಅಜಂ ಖಾನ್-ಅಜಂ ಖಾನ್
ಅಬ್ದುಲ್ಲಾ ಅಜಂ ಖಾನ್-ಅಜಂ ಖಾನ್
ರಾಮ್‌ಪುರ್(ಉತ್ತರ ಪ್ರದೇಶ): ಎರಡು ಪ್ಯಾನ್ ಕಾರ್ಡ್ ಹೊಂದಿರುವ ಆರೋಪದ ಮೇಲೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಪುತ್ರ ಅಬ್ದುಲ್ಲಾ ಅಜಂ ಖಾನ್ ವಿರುದ್ಧ ತನಿಖೆ ನಡೆಸುವಂತೆ ರಾಮ್ಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಚುನಾವಣಾ ಆಯೋಗ ಆದೇಶಿಸಿದೆ. 
ಪ್ರಮಾಣಪತ್ರದಲ್ಲಿ ಅಬ್ದುಲ್ಲಾ ಅಜಂ ಖಾನ್ ಎರಡು ಪ್ಯಾನ್ ಕಾರ್ಡ್ ಹೊಂದಿರುವುದಾಗಿ ನಮೂದಿಸಿದ್ದು ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಸಂಬಂಧ ಶೀಘ್ರ ತನಿಖೆ ನಡೆಸುವಂತೆ ಸೂಚಿಸಿದ್ದಾರೆ ಎಂದು ರಾಮ್ಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. 
ಅಬ್ದುಲ್ಲಾ ಅಜಂ ಖಾನ್ ಚುನಾವಣಾ ಆಯೋಗಕ್ಕೆ ನೀಡಿದ ಪ್ರಮಾಣ ಪತ್ರದಲ್ಲಿ ಎರಡು ಪ್ಯಾನ್ ಕಾರ್ಡ್ ಹೊಂದಿರುವುದಾಗಿ ನಮೂದಿಸಿದ್ದಾರೆ ಎಂದು ಮಾಜಿ ಸಚಿವ ಶಿವ್ ಬಹದೂರ್ ಸಕ್ಸೆನಾ ಪುತ್ರ ಆಕಾಶ್ ಸಕ್ಸೆನಾ ಚುನಾವಣಾ ಆಯೋಗದಲ್ಲಿ ದೂರು ದಾಖಲಿಸಿದ್ದು ಈ ಹಿನ್ನೆಲೆಯಲ್ಲಿ ತನಿಖೆಗೆ ಆಯೋಗ ಸೂಚಿಸಿದೆ. 
2016-17ರ ಆದಾಯ ತೆರಿಗೆ ರಿಟರ್ನ್ಸ್ ಗಾಗಿ ಅಬ್ದುಲ್ಲಾ ಅಜಂ ಖಾನ್ ಒಂದು ಪ್ಯಾನ್ ಕಾರ್ಡ್ ನಂಬರ್ ಬಳಸಿದ್ದು, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಇನ್ನೊಂದು ಪ್ಯಾನ್ ಕಾರ್ಡ್ ನಂಬರ್ ಕೊಟ್ಟಿದ್ದಾರೆ ಎಂದು ಆಕಾಶ್ ಸಕ್ಸೆನಾ ದೂರು ದಾಖಲಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com