ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್

ನೌಕರರು ಉಚಿತವಾಗಿ ಕೆಲಸ ಮಾಡಲು ಬಾಬಾ ರಾಮ್ ದೇವ್ ಬಯಸುತ್ತಾರೆ: ಪತಂಜಲಿ ಮಾಜಿ ಸಿಇಓ

ಯೋಗಗುರು ಬಾಬಾರಾಮದೇವ್ ಅವರ ಪತಂಜಲಿ ಆಯುರ್ವೇದ ಉತ್ಪನ್ನಗಳ ವಹಿವಾಟು 10,500 ಕೋಟಿ ರು ತಲುಪಿದೆ ಎಂದು ...
ನವದೆಹಲಿ: ಯೋಗಗುರು ಬಾಬಾರಾಮದೇವ್ ಅವರ ಪತಂಜಲಿ ಆಯುರ್ವೇದ ಉತ್ಪನ್ನಗಳ ವಹಿವಾಟು 10,500 ಕೋಟಿ ರು ತಲುಪಿದೆ ಎಂದು ಕಂಪನಿ ಹೇಳುತ್ತಿದೆ. ನೌಕರರು ಸಂಬಳ ಪಡೆಯದೇ ಉಚಿತವಾಗಿ ಸೇವೆ ಮಾಡುತ್ತಿದ್ದಾರೆ ಎಂದು ಕಂಪನಿ ನಂಬಿದೆ. ನೌಕರರು ಸಂಬಳ ಪಡೆಯದೆ ಕೆಲಸ ಮಾಡಬಹುದು ಎಂದು ಪತಂಜಲಿ ಕಂಪನಿಯ ಮಾಜಿ ಸಿಇಓ ಎಸ್ ಕೆ ಪಾತ್ರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 
ತನ್ನ ಕಂಪನಿಯಲ್ಲಿ ಕೆಲಸ ಮಾಡುವ ನೌಕರರಿಗೆ ಪತಂಜಲಿ ತೀರಾ ಕಡಿವೆ ವೇತನ ನೀಡುತ್ತಿದೆ. ಇದನ್ನು ಬಾಬಾ ರಾಮ್ ದೇವ್ ಸೇವೆ ಎಂದು ಕರೆಯುತ್ತಾರೆ. ಪತಂಜಲಿ ಆಯುರ್ವೇದ ಮತ್ತು ಪತಂಜಲಿ ಫುಡ್ ಪಾರ್ಕ್ ನಲ್ಲಿ ಎರಡು ಕಡೆ ಕೆಲಸ ನಿರ್ವಹಿಸುತ್ತಿದ್ದೆ. ನನಗೆ ಎರಡೂ ಕೆಲಸಗಳ ವೇತನ ನೀಡುವುದಾಗಿ ಅವರು ಹೇಳಿದ್ದರು. ಆದರೆ, ಪತ್ರಾಜಿ ಇಲ್ಲಿಗೆ ಸೇವೆ ಮಾಡಲು ಬಂದಿದ್ದಾರೆ, ಸದ್ಯ ಅವರು ಇಲ್ಲಿ ವೇತನ ಪಡೆಯುತ್ತಿದ್ದಾರೆ, ಶೀಘ್ರವೇ ಅವರು ತಾವು ಮಾಡುತ್ತಿರುವ ಕೆಲಸಕ್ಕೆ ಯಾವುದೇ ವೇತನ ಪಡೆಯುವುದಿಲ್ಲ ಎಂದು ಪ್ರತಿಯೊಬ್ಬರಿಗೂ ಘೋಷಿಸಿದರು ಎಂದು ಪಾತ್ರ ಹೇಳಿದ್ದಾರೆ.
ಪತಂಜಲಿ ಆಯುರ್ವೇದದ ಅಧಿಕೃತ ವೆಬ್ ಸೈಟ್ ನಲ್ಲಿಯೂ ನಾನು ಸೇವೆ ಮಾಡುತ್ತಿರವ ಉತ್ತಮ ಮನುಷ್ಯ ಎಂದು ಘೋಷಿಸಿದೆ. 
ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ಪದವೀಧರಾಗಿದ್ದು,  ನನ್ನ ವೇತನ ಪಡೆಯಲು ಬಾಬಾ ರಾಮ್ ದೇವ್ ಜೊತೆ ನಿರಂತರವಾಗಿ ವಾದ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
ನನಗೆ ನನ್ನ ಹಣ ಬೇಕು, ಹಣ ನನಗಾಗಿ ಅಲ್ಲ, ನನ್ನ ಕುಟುಂಬಕ್ಕಾಗಿ, ನನ್ನ ಕುಟುಂಬಸ್ಥರಿಗಾಗಿ ಹಾಗೂ ಸಂಭಂಧಿಕರಿದಾದಿ ಬೇಕು ಎಂದು ಹೇಳಿದ್ದೆ. ನಂತರ ಬಾಬಾಜಿ ಇದನ್ನು ಪರಿಶೀಲಿಸಿ ನಾನು ಎರಡು ಕೆಲಸ ಮಾಡುತ್ತಿದ್ದರೂ, ಒಂದು ಉದ್ಯೋಗಕ್ಕೆ ಮಾತ್ರ ವೇತನ ನೀಡಿದರು, ಆದರೆ ಮೂಲವಾಗಿ ನಾನು ಉಚಿತವಾಗಿ ಕೆಲಸ ಮಾಡುವುದು ಅವರಿಗೆ ಬೇಕಾಗಿತ್ತು ಎಂದು ಹೇಳಿದ್ದಾರೆ.
ಪತಂಜಲಿ ಫುಡ್ ಪಾರ್ಕ್ ಮತ್ತು ಪತಂಜಲಿ ಆಯುರ್ವೇದ ಕಂಪನಿಗೆ 2011 ರಿಂದ 2014 ರ ವರೆಗೆ ಪಾತ್ರಾ ಸಿಇಓ ಆಗಿದ್ದರು. 317 ಕೋಟಿ ರು ನಿಂದ 2,500 ಕೋಟಿದೆ ಕಂಪನಿಯ ವಹಿವಾಟು ಏರಿಕೆಯಾಯಿತು. 2018ರ ವೇಳೆಗೆ 20 ಸಾವಿರ ಕೋಟಿ ಆದಾಯದ ನಿರೀಕ್ಷೆಯಲ್ಲಿರುವುದಾಗಿ ರಾಮ್ ದೇವ್ ಇತ್ತೀಚೆಗೆ ಮಾಧ್ಯಮಗಳಿಗೆ ಹೇಳಿದ್ದರು.
ಕಂಪನಿ ಆದಾಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಉತ್ಪನ್ನಗಳ ಮಾರಾಟ ವಾಗಬೇಕೆಂದು ಮಾತ್ರ ಬಾಬಾಜಿ ಬಯಸುತ್ತಾರೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com