ಡೊನಾಲ್ಡ್ ಟ್ರಂಪ್ ಗೆ ರಾಖಿ ಕಳಿಸಿದ ಹರ್ಯಾಣ ಗ್ರಾಮ!

ಸಹೋದರ-ಸಹೋದರಿಯರ ಹಬ್ಬವಾಗಿರುವ ರಕ್ಷಾ ಬಂಧನ ಹತ್ತಿರ ಬರುತ್ತಿದ್ದು, ಹರ್ಯಾಣದ ಮುಸ್ಲಿಂ ಬಾಹುಳ್ಯವಿರುವ ಗ್ರಾಮದ ಮಹಿಳೆಯರು ಮತ್ತು ಯುವತಿಯರು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ಹರ್ಯಾಣ: ಸಹೋದರ-ಸಹೋದರಿಯರ ಹಬ್ಬವಾಗಿರುವ ರಕ್ಷಾ ಬಂಧನ ಹತ್ತಿರ ಬರುತ್ತಿದ್ದು, ಹರ್ಯಾಣದ ಮುಸ್ಲಿಂ ಬಾಹುಳ್ಯವಿರುವ ಗ್ರಾಮದ ಮಹಿಳೆಯರು ಮತ್ತು ಯುವತಿಯರು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ 1001 ರಾಖಿಗಳನ್ನು ಕಳಿಸಿಕೊಡಲು ಸಿದ್ಧತೆ ನಡೆಸಿದ್ದಾರೆ. 
ಹರ್ಯಾಣದ ಮರೋರಾ ಗ್ರಾಮದ ಮಹಿಳೆಯರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ರಾಖಿ ಕಳಿಸಿಕೊಡಲು ಮುಂದಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಹೆಸರನ್ನ ಸಾಂಕೇತಿಕವಾಗಿಟ್ಟುಕೊಂಡು ಈ ಗ್ರಾಮದಲ್ಲಿ ಎನ್ ಜಿಒ ಒಂದು ಕಾರ್ಯನಿರ್ವಹಿಸುತ್ತಿದೆ ಎಂಬುದು ಮತ್ತೊಂದು ವಿಶೇಷವಾಗಿದೆ. 
ಗ್ರಾಮದಲ್ಲಿರುವ ವಿದ್ಯಾರ್ಥಿಗಳು 1001 ರಾಖಿಗಳನ್ನು ಡೊನಾಲ್ಡ್ ಟ್ರಂಪ್ ಗಾಗಿ ತಯಾರಿಸಿದ್ದು, 501 ರಾಖಿಗಳನ್ನು ನರೇಂದ್ರ ಮೋದಿಗಾಗಿ ತಯಾರಿಸಿದ್ದಾರೆ ಎಂದು ಎನ್ ಜಿಒ ದ ಉಪಾಧ್ಯಕ್ಷರಾಗಿರುವ ಮೋನಿಕಾ ಜೈನ್ ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಹಾಗೂ ನರೇಂದ್ರ ಮೋದಿ ಅವರನ್ನು ಈ ಗ್ರಾಮದ ಮಹಿಳೆಯರು ಹಾಗೂ ಯುವತಿಯರು ಅಣ್ಣಂದಿರೆಂದು ಪರಿಗಣಿಸಿದ್ದಾರೆ. ಈಗಾಗಲೇ ಡೊನಾಲ್ಡ್ ಟ್ರಂಪ್ ಅವರಿಗೆ ರಾಖಿಗಳನ್ನು ಕಳಿಸಿಕೊಡಲಾಗಿದ್ದು ಆಗಸ್ಟ್ 7 ರಂದು ರಾಖಿಗಳು ತಲುಪಲಿದೆ ಎಂದು ತಿಳಿದುಬಂದಿದ್ದು, ರಾಖಿಗಳೊಂದಿಗೆ ಬರೆದಿರುವ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮ್ಮ ಗ್ರಾಮಕ್ಕೆ ಭೇಟಿ ನೀಡುವಂತೆ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿ ಗ್ರಾಮದ ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com