ಪಹ್ಲಾಜ್ ನಿಹಲಾನಿ
ದೇಶ
ಪತ್ರಕರ್ತೆ ವಿರುದ್ಧ ಸಿಬಿಎಫ್ ಸಿ ಮುಖ್ಯಸ್ಥ ಪಹ್ಲಾಜ್ ನಿಹಲಾನಿ ಕೇಸು ದಾಖಲು
ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ ಮುಖ್ಯಸ್ಥ ಪಹ್ಲಾಜ್ ನಿಹಲಾನಿ ಮುಂಬೈಯ ವರದಿಗಾರ್ತಿಯೊಬ್ಬರ...
ನವದೆಹಲಿ: ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ ಮುಖ್ಯಸ್ಥ ಪಹ್ಲಾಜ್ ನಿಹಲಾನಿ ಮುಂಬೈಯ ವರದಿಗಾರ್ತಿಯೊಬ್ಬರ ವಿರುದ್ಧ ಕೇಸು ದಾಖಲಿಸಿದ್ದಾರೆ. ವರದಿಗಾರರು ತಮಗೆ ಕಿರುಕುಳ ನೀಡುತ್ತಿದ್ದಾರಲ್ಲದೆ ಗೌಪ್ಯತೆಯ ಬೆದರಿಕೆ ಮತ್ತು ಖಾಸಗಿತನಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ನಿಹಲಾನಿ ದೂರಿನಲ್ಲಿ ಆರೋಪಿಸಿದ್ದಾರೆ.
ತಮ್ಮ ಕಚೇರಿ ಆವರಣಕ್ಕೆ ವರದಿಗಾರ್ತಿಯೊಬ್ಬರು ಬಂದು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಸಂಭಾವ್ಯ ನಡವಳಿಕೆಯ ಎಲ್ಲಾ ಮಟ್ಟಗಳನ್ನು ಮೀರಿದ್ದಾರೆ. ಕಚೇರಿಯ ಭದ್ರತಾಧಿಕಾರಿಗಳಿಗೆ ತಮ್ಮ ಕಚೇರಿಯೊಳಗೆ ಪ್ರವೇಶಿಸಲು ಬಿಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.
ಈ ಬಗ್ಗೆ ಗಮ್ದೇವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದ್ದು ಹೆಚ್ಚಿನ ವಿವರಗಳು ಗೊತ್ತಾಗಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ