ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಪದವಿ ಪಡೆದಿರುವ ರಾಜೀವ್ ಕುಮಾರ್ ಅವರು ಲಖನೌ ವಿವಿಯಿಂದ ಪಿಹೆಚ್ ಡಿ ಪದವಿಯನ್ನೂ ಪಡೆದಿದ್ದು, ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ನಲ್ಲಿ ಸೀನಿಯರ್ ಫೆಲೋ ಆಗಿದ್ದು, ಎಫ್ಐಸಿಸಿಐ ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೇ 2006-2008 ರ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಸದಸ್ಯರಾಗಿಯೂ ಇದ್ದರು.