ಐಷಾರಾಮಿ ಜೀವನ ಶೈಲಿ: ಪಕ್ಷದ ಸಂಸದನಿಗೆ ಶಿಕ್ಷೆ ವಿಧಿಸಲು ಸಿಪಿಐ(ಎಂ) ಶಿಫಾರಸು

ಅದ್ಧೂರಿ ಜೀವನ ಶೈಲಿ ನಡೆಸುತ್ತಿದ್ದ ತನ್ನ ಪಕ್ಷದ ಸಂಸದನಿಗೆ ಶಿಕ್ಷೆ ವಿಧಿಸಲು ಪಶ್ಚಿಮ ಬಂಗಾಳದ ಸಿಪಿಐ(ಎಂ) ಸಮಿತಿ ಶಿಫಾರಸು ಮಾಡಿದೆ.
ಸಿಪಿಐ(ಎಂ)
ಸಿಪಿಐ(ಎಂ)
ಕೋಲ್ಕತ್ತಾ: ಐಷಾರಾಮಿ ಜೀವನ ಶೈಲಿ ನಡೆಸುತ್ತಿದ್ದ ತನ್ನ ಪಕ್ಷದ ಸಂಸದನಿಗೆ ಶಿಕ್ಷೆ ವಿಧಿಸಲು ಪಶ್ಚಿಮ ಬಂಗಾಳದ ಸಿಪಿಐ(ಎಂ) ಸಮಿತಿ ಶಿಫಾರಸು ಮಾಡಿದೆ. 
ಪಶ್ಚಿಮ ಬಂಗಾಳದ ಸಿಪಿಐ(ಎಂ) ಸಂಸದ ರಿತಬ್ರಾಟಾ ಬ್ಯಾನರ್ಜಿ ವಿರುದ್ಧ ಅದ್ಧೂರಿ ಜೀವನ ಶೈಲಿ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿಪಿಐ(ಎಂ) ಸಂಸದರಿಗೆ ಶಿಕ್ಷೆ ವಿಧಿಸಲು ಶಿಫಾರಸ್ಸು ಮಾಡಲಾಗಿದೆ. ರಿತಬ್ರಾಟಾ ಬ್ಯಾನರ್ಜಿ ಐಷಾರಾಮಿ ಜೀವನ ಶೈಲಿ ನಡೆಸುತ್ತಿದ್ದದ್ದು ತಪ್ಪು ಹಾಗೂ ಆ ತಪ್ಪನ್ನು ಅವರು ತಿದ್ದಿಕೊಳ್ಳಬೇಕಾಗುತ್ತದೆ. ಆದ್ದರಿಂದ ಶಿಕ್ಷೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಸೂರ್ಯಕಾಂತ್ ಮಿಶ್ರಾ ಹೇಳಿದ್ದಾರೆ. 
ರಿತಬ್ರಾಟ ಬ್ಯಾನರ್ಜಿ ಅವರು ಅದ್ಧೂರಿ ಜೀವನ ಶೈಲಿ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಆಂತರಿಕ ಸಮಿತಿಯಿಂದ ವಿಚಾರಣೆ ನಡೆಸಿ, ಪಕ್ಷದಿಂದ ಅಮಾನತು ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com