ಹೈದರಾಬಾದ್ ಆತ್ಮಹತ್ಯಾ ಬಾಂಬ್ ದಾಳಿ ಪ್ರಕರಣ: ಎಲ್ಲಾ ಆರೋಪಿಗಳು ಖುಲಾಸೆ

2005 ರಲ್ಲಿ ಹೈದಾರಾಬಾದ್ ನ ಪೊಲೀಸ್ ಠಾಣೆ ಕಟ್ಟಡದ ಬಳಿ ನಡೆದಿದ್ದ ಆತ್ಮಹತ್ಯಾ ಬಾಂಬ್ ದಾಳಿ ಪ್ರಕರಣದಲ್ಲಿ ಕೋರ್ಟ್ ಎಲ್ಲಾ ಆರೋಪಿಗಳಾನ್ನು ಖುಲಾಸೆಗೊಳಿಸಿದೆ.
ಹೈದರಾಬಾದ್ ಸ್ಫೋಟ ಪ್ರಕರಣ
ಹೈದರಾಬಾದ್ ಸ್ಫೋಟ ಪ್ರಕರಣ
Updated on: 
ಹೈದರಾಬಾದ್: 2005 ರಲ್ಲಿ ಹೈದಾರಾಬಾದ್ ನ ಪೊಲೀಸ್ ಠಾಣೆ ಕಟ್ಟಡದ ಬಳಿ ನಡೆದಿದ್ದ ಆತ್ಮಹತ್ಯಾ ಬಾಂಬ್ ದಾಳಿ ಪ್ರಕರಣದಲ್ಲಿ ಕೋರ್ಟ್ ಎಲ್ಲಾ ಆರೋಪಿಗಳಾನ್ನು ಖುಲಾಸೆಗೊಳಿಸಿದೆ. 
ಸಾಕ್ಷ್ಯಾಧಾರಗಳ ಕೊರತೆಯಿಂದ ಮೆಟ್ರೋಪಾಲಿಟನ್ ಸೆಷನ್ಸ್ ಕೋರ್ಟ್ ಎಲ್ಲಾ 10 ಆರೋಪಿಗಳನ್ನೂ ಖುಲಾಸೆಗೊಳಿಸಿದೆ. ಟಾಸ್ಕ್ ಫೋರ್ಸ್ ಕಚೇರಿ ಬಳಿ 2005 ರ ಅಕ್ಟೋಬರ್ 12 ರಂದು  ಬಾಂಗ್ಲಾದೇಶದ ಉಗ್ರ ನಡೆಸಿದ್ದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಓರ್ವ ಹೋಮ್ ಗಾರ್ಡ್ ಸಾವನ್ನಪ್ಪಿದ್ದರು, ಮತ್ತೋರ್ವರಿಗೆ ಗಾಯಗಳಾಗಿತ್ತು. 
ಬಾಂಗ್ಲಾದೇಶದ ಹರ್ಕತುಲ್ ಜಿಹಾದ್-ಎ-ಇಸ್ಲಾಮಿ ಉಗ್ರ ಸಂಘಟನೆ ಕಾರಣ ಎಂದು ವಿಶೇಷ ತನಿಖಾ ತಂಡ ಶಂಕಿಸಿತ್ತು. ಪ್ರಕರಣದ ಸಂಬಂಧ ಮೊಹಮ್ಮದ್ ಅಬ್ದುಲ್ ಜಹೀದ್, ಅಬ್ದುಲ್ ಕಲೀಮ್, ಶಕೀಲ್, ಸೈಯದ್ ಹಾಜಿ, ಅಜ್ಮಲ್ ಅಲಿ ಖಾನ್, ಅಜ್ಮಾತ್ ಅಲಿ, ಮಹಮೂದ್ ಬರುದ್ವಾಲಾ, ಶೇಕ್ ಅಬ್ದುಲ್ ಖಾಜಾ, ನಫೀಸ್ ಬಿಸ್ವಾಸ್ ಮತ್ತು ಬಿಲಾಲುದ್ದೀನ್ ಎಸ್ಐಟಿ ಬಂಧಿಸಿ ಚಾರ್ಜ್ ಶೀಟ್ ದಾಖಲಿಸಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com