ಅಯೋಧ್ಯ ವಿವಾದ: ಡಿ.5ರಿಂದ ಅಂತಿಮ ವಿಚಾರಣೆ, ದಾಖಲೆ ಭಾಷಾಂತರಕ್ಕೆ 3 ತಿಂಗಳ ಕಾಲಾವಕಾಶ

ಸುಮಾರು ಎರಡು ದಶಕಗಳ ಅಯೋಧ್ಯಯ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಡಿಸೆಂಬರ್ 5ರಿಂದ ಅಂತಿಮ...
ಬಾಬ್ರಿ ಮಸೀದಿ
ಬಾಬ್ರಿ ಮಸೀದಿ
ನವದೆಹಲಿ: ಸುಮಾರು ಎರಡು ದಶಕಗಳ ಅಯೋಧ್ಯಯ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಡಿಸೆಂಬರ್ 5ರಿಂದ ಅಂತಿಮ ವಿಚಾರಣೆ ಆರಂಭಿಸಲಿದೆ.
ಅಯೋಧ್ಯ ವಿವಾದಕ್ಕೆ ಸಂಬಂಧಿಸಿದಂತೆ ಅಲಹಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ದಾಖಲೆಗಳ ಭಾಷಾಂತರಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಿ, ಡಿಸೆಂಬರ್ 5ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಸುಮಾರು 90 ಸಾವಿರ ಪುಟಗಳನ್ನು ಒಳಗೊಂಡಿರುವ ಐತಿಹಾಸಿಕ ದಾಖಲೆಗಳನ್ನು 7 ಭಾಷೆಗೆ ಭಾಷಾಂತರಿಸಲು ಕಾಲಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ಸುನ್ನಿ ವಕ್ಫ್ ಬೋರ್ಡ್ ಗೆ ಕೋರ್ಟ್ ಮೂರು ತಿಂಗಳ ಕಾಲಾವಕಾಶ ನೀಡಿದೆ. ಅಲ್ಲದೆ ಡಿಸೆಂಬರ್ 5ರಿಂದ ನಿರಂತರವಾಗಿ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂ ಪೀಠ ತಿಳಿಸಿದೆ.
ಈ ಪ್ರಕರಣದಲ್ಲಿ ಮುವರು ಪ್ರಮುಖ ಅರ್ಜಿದಾರರಿದ್ದಾರೆ. ಹಾಗಾಗಿ ಮೊದಲು ಪ್ರಮುಖ ಅರ್ಜಿದಾರರ ವಾದ ಆಲಿಸುತ್ತೇವೆ. ರಾಮ್ ಲಲ್ಲ ವಿರಾಜಮಾನ್, ನಿರ್ಮೊಹಿ ಅಖಾಡ್ ಹಾಗೂ ಸುನ್ನಿ ಬೋರ್ಡ್ ಕೇಸ್ ನ ಪ್ರಮುಖ ಅರ್ಜಿದಾರರು ಎಂದು ಪೀಠ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com