ವಂದೇ ಮಾತರಂ ಕಡ್ಡಾಯ ಮೂಲಕ ಬಿಜೆಪಿ ಹಿಂದೂತ್ವ ಹರಡಿ, ಜಾತ್ಯಾತೀತತೆ ನಾಶಮಾಡುತ್ತಿದೆ: ಓವೈಸಿ

ವಂದೇ ಮಾತರಂ ಕಡ್ಡಾಯ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದೂತ್ವವನ್ನು ಹರಡುತ್ತಾ, ದೇಶದಲ್ಲಿ ಜಾತ್ಯಾತೀತೆಯನ್ನು...
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ
ನವದೆಹಲಿ: ವಂದೇ ಮಾತರಂ ಕಡ್ಡಾಯ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದೂತ್ವವನ್ನು ಹರಡುತ್ತಾ, ದೇಶದಲ್ಲಿ ಜಾತ್ಯಾತೀತೆಯನ್ನು ನಾಶ ಮಾಡಲಾಗುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ. 
ವಂದೇ ಮಾತರಂ ಕಡ್ಡಾಯ ಅಸಂವಿಧಾನಿಕವಾಗಿದ್ದು ಇದೊಂದು ತಪ್ಪು ನಿರ್ಧಾರ. ವಂದೇ ಮಾತರಂ ನಮ್ಮ ರಾಷ್ಟ್ರೀಯ ಹಾಡು, ಆದರೆ ಕಡ್ಡಾಯವಾಗಿ ಹಾಡಬೇಕು ಎನ್ನುವುದಕ್ಕೆ ಯಾವುದೇ ಕಾನೂನು ಇಲ್ಲ. ರಾಷ್ಟ್ರಗೀತೆಗೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಹಿಂದೂತ್ವವನ್ನು ಉತ್ತೇಜಿಸಲು ಮತ್ತು ಜಾತ್ಯತೀತತೆಯನ್ನು ಅಂತ್ಯಗೊಳಿಸಲು, ಇಂತಹ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಓವೈಸಿ ಹೇಳಿದ್ದಾರೆ. 
ನಾವೂ ಮುಸ್ಲಿಂರು ಅಲ್ಲಾನನ್ನು ಮಾತ್ರ ಪೂಜಿಸುತ್ತೇವೆ. ನಾವು ಮೆಕ್ಕಾ ಅಥವಾ ಪ್ರವಾದಿ ಮುಹಮ್ಮದ್ ರನ್ನು ಮಾತ್ರ ಶ್ಲಾಘಿಸುತ್ತೇವೆ. ಹಾಗಂತ ನಾವು ನಮ್ಮ ದೇಶವನ್ನು ಪ್ರೀತಿಸುವುದಿಲ್ಲ ಎಂದರ್ಥವಲ್ಲ. ದೇಶಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿರುವ ಚರಿತ್ರೆ ಇದೆ. ಹಾಗಂತ ಈಗ ಮಾಡುವುದಿಲ್ಲ ಎಂದಲ್ಲ. ನಾವು ಎಲ್ಲದಕ್ಕೂ ಸಿದ್ಧ. ಆದರೆ ಸಂವಿಧಾನದ ಪ್ರಕಾರ ನಾವು ಧರ್ಮದ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ. ಹೀಗಾಗಿ ಹಿಂದೂತ್ವವನ್ನು ಯಾಕೆ ಉತ್ತೇಜಿಸಬೇಕು ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com