ರಾಜ ಕುಟುಂಬದ ನಿಲೇಶ್ ರಯಾನಿ ಕೊಲೆ: ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ

2004ರ ಫೆಬ್ರವರಿ 8ರಂದು ನಡೆದಿದ್ದ ನಿಲೇಶ್ ರಯಾನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕನಿಗೆ ಗುಜರಾತ್ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ...
ಬಿಜೆಪಿ
ಬಿಜೆಪಿ
ಅಹಮದಾಬಾದ್(ಗುಜರಾತ್): 2004ರ ಫೆಬ್ರವರಿ 8ರಂದು ನಡೆದಿದ್ದ ನಿಲೇಶ್ ರಯಾನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕನಿಗೆ ಗುಜರಾತ್ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. 
ಕೊಲೆ ಪ್ರಕರಣ ಸಂಬಂಧ ಗುಜರಾತ್ ನ ಗೂಂಡಲ್ ಶಾಸಕ ಜಯರಾಜ್ ಸಿನ್ಹಾ ಜಡೇಜಾ ಹಾಗೂ ಅವರ ಆಪ್ತರಾದ ಮಹೇಂದ್ರ ಸಿನ್ಹಾ ರಾಣ ಮತ್ತು ಅಮರ್ಜೀತ್ ಸಿನ್ಹಾ ಅವರಿಗೂ ಹೈಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿದೆ. 
ರಾಜ್ ಕೋಟ್ ಜಿಲ್ಲೆಯ ಗೂಂಡಲ್ ನ ರಾಜ ಕುಟುಂಬಕ್ಕೆ ಸೇರಿದ 35 ಎಕರೆ ಎಸ್ಟೇಟ್ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಜಯರಾಜ್ ಸಿನ್ಹಾ ಆಪ್ತ ವಿಕ್ರಮ್ ಸಿನ್ಹಾ ಅವರ ಕೊಲೆ 2003ರಲ್ಲಿ ನಡೆದಿತ್ತು. ಇದಾದ ಎರಡೇ ತಿಂಗಳಲ್ಲಿ ನಿಲೇಶ್ ರಯಾನಿ ಕೊಲೆಯಾಗಿತ್ತು. ರಯಾನಿಯನ್ನು ಜಡೇಜಾ ಅವರು ಗುಂಡಿಟ್ಟು ಹತ್ಯೆ ಮಾಡಿದ್ದರು. 
ಇದಾದ ಕೆಲ ತಿಂಗಳಲ್ಲೇ ನಾಲ್ವರು ಶಾರ್ಪ್ ಶೂಟರ್ಸ್ ರಯಾನಿ ಆಪ್ತ, ರಾಜ್ ಕೋಟ್ ನ ಜಿಲ್ಲಾ ಯುವ ಅಧ್ಯಕ್ಷ  ವಿನು ಸಿಂಘಾಲ ಅವರನ್ನು ಅವರ ಮನೆಯಲ್ಲೇ ಪಾಯಿಂಟ್ ಬ್ಲಾಂಕ್ ನಲ್ಲಿ ಶೂಟ್ ಮಾಡಿದ್ದರು. ಈ ಪ್ರಕರಣ ಸಂಬಂದ ಕಳೆದ ವರ್ಷ ಜಡೇಜಾ ನಿರಪರಾಧಿ ಎಂದು ಕೋರ್ಟ್ ತೀರ್ಪು ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com