ಚುನಾವಣೆ ಹಿನ್ನೆಲೆ, ಪ್ರಮುಖ ಸುಧಾರಣೆಗಳ ಘೋಷಣೆಗಳಿಂದ ದೂರವಿರಲಿರುವ ಪ್ರಧಾನಿ ಮೋದಿ ಸರ್ಕಾರ: ವರದಿ

2019 ರ ಲೋಕಸಭಾ ಚುನಾವಣೆಗೆ ಇನ್ನೆರಡು ವರ್ಷಗಳು ಬಾಕಿ ಇದ್ದು, ಮುಂದಿನ ಚುನಾವಣೆಯ ಗೆಲುವಿಗೆ ಮೋದಿ ನೇತೃತ್ವದ ತಂಡ ಈಗಿನಿಂದಲೇ ತಯಾರಿ ನಡೆಸುತ್ತಿರುವಂತಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: 2019 ರ ಲೋಕಸಭಾ ಚುನಾವಣೆಗೆ ಇನ್ನೆರಡು ವರ್ಷಗಳು ಬಾಕಿ ಇದ್ದು, ಮುಂದಿನ ಚುನಾವಣೆಯ ಗೆಲುವಿಗೆ ಮೋದಿ ನೇತೃತ್ವದ ತಂಡ ಈಗಿನಿಂದಲೇ ತಯಾರಿ ನಡೆಸುತ್ತಿರುವಂತಿದೆ. ಇದರ ಭಾಗವಾಗಿ ಮಹತ್ವದ ಸುದ್ದಿಯೊಂದು ಬಹಿರಂಗವಾಗಿದ್ದು, ಚುನಾವಣೆಯ ವರೆಗೂ ಯಾವುದೇ ಮಹತ್ವದ ಸುಧಾರಣೆಗಳಿಗೆ ಕೈಹಾಕದೇ ಇರಲು ಮೋದಿ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. 
ಈಗಾಗಲೇ ಕೈಗೊಳ್ಳಲಾಗಿರುವ ಸುಧಾರಣೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವತ್ತ ಮೋದಿ ಸರ್ಕಾರ ಗಮನಹರಿಸಲಿದ್ದು, ಹೊಸ ಸುಧಾರಣೆಗಳಿಗೆ ಹೋಗದೇ ಇರಲು ನಿರ್ಧರಿಸಿದೆ. ಹೊಸ ಕಾನೂನು ಸುಧಾರಣೆಗಳ ಬದಲಿಗೆ ಆಡಳಿತಾತ್ಮಕ ಸುಧಾರಣೆಗಳತ್ತ ಮೋದಿ ಸರ್ಕಾರ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇದೆ ಎಂದು ಬಾರ್ಕ್ಲೇಸ್ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞ ಸಿದ್ಧಾರ್ಥ ಸನ್ಯಾಲ್ ಹೇಳಿದ್ದಾರೆ. 
ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ, ಮೋದಿ ತಮ್ಮ ರಾಜಕೀಯ ಬಂಡವಾಳವನ್ನು ಬಿಜೆಪಿ ಪಕ್ಷದ ರಾಷ್ಟ್ರೀಯತೆಯ ಸಿದ್ಧಾಂತವನ್ನು ಹೆಚ್ಚಿಸಲು ಉಪಯೋಗಿಸಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com