ನವದೆಹಲಿ: ಭಯೋತ್ಪಾದನೆಗೆ ಧನ ಸಹಾಯ ಮಾಡಿದ ಪ್ರಕರಣ ಸಂಬಂಧ ಹುರಿಯತ್ ಮುಖಂಡ ಗಿಲಾನಿ ಅಳಿಯ ಸೇರಿದಂತೆ ನಾಲ್ವರು ಕಾಶ್ಮೀರಿ ಪ್ರತ್ಯೇಕತಾವಾದಿ ಮುಖಂಡರುಗಳನ್ನು ದೆಹಲಿ ಕೋರ್ಟ್ ನ್ಯಾಯಾಂಗ ಬಂಧನಕ್ಕೊಳಪಡಿಸಿದೆ.
ಗಿಲಾನಿ ಅಳಿಯ ಅಲ್ತಾಫ್ ಅಹಮದ್ ಶಾ, ಪೀರ್ ಸೈಫುಲ್ಲಾ ಮತ್ತು ಮೆರಾಜುದ್ದೀನ್ ಕಲ್ವಾಲ್ ಮತ್ತು ನಯೀಮ್ ಖಾನ್ ಅವರುಗಳನ್ನು ಮ್ಯಾಜಿಸ್ಚ್ರೇಟ್ ಪಂಕಜ್ ಶರ್ಮಾ14 ದಿನಗಳ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಈ ನಾಲ್ಕು ಮಂದಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ತನಿಖಾ ದಲ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.
ಕಾಶ್ಮೀರ ಕಣಿವೆಯಲ್ಲಿ ಜನರ ಶಾಂತಿಗೆ ಭಂಗ ತರುವಂತ ಚಟುವಟಿಕೆಗಳು ಹಾಗೂ ಉಗ್ರರಿಗೆ ಧನ ಸಹಾಯ ಮಾಡಿದ ಪ್ರಕರಣ ಸಂಬಂಧ ಜುಲೈ 24 ರಂದು ಎನ್ ಐ ಎ 7 ಮಂದಿಯನ್ನು ಬಂಧಿಸಿತ್ತು.
ಉಳಿದ ಮೂವರು ಪ್ರತ್ಯೇಕತಾವಾದಿ ಮುಖಂಡರಾದ ಶಾಹಿದ್ ಉಲ್ ಇಸ್ಲಾಂ, ಪಾರೂಕ್ ಅಹ್ಮದ್ ದರ್ ಮತ್ತು ಮೊಹಮದ್ ಅಕ್ಬರ್ ಖಂಡೆ ಅವರುಗಳನ್ನು ಸೆಪ್ಚಂಬರ್ 1 ರ ವರೆಗೆ ನ್ಯಾಯಾಂಗ ವಶಕ್ಕೆ ಕಳಹಿಸಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಚಟಿಕೆಗಳಿಗೆ ಹಣ ಸಂಗ್ರಹಿಸಿ ನೀಡಲಾಗಿದೆ ಎಂದು ಎನ್ ಐ ಎ ಆರೋಪಿಸಿತ್ತು.