ನವದೆಹಲಿ: ಕ್ಯಾನ್ಸರ್ ನಿಂದ ಬಳಲುತ್ತಿರುವ ಪಾಕಿಸ್ತಾನ ಮಹಿಳೆಗೆ ಚಿಕಿತ್ಸೆಗೆ ವೀಸಾ ನೀಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ತನಗೆ ವೈದ್ಯಕೀಯ ವೀಸಾ ಕೊಡಿಸುವಂತೆ ಪಾಕಿಸ್ತಾನದ ಮಹಿಳೆ ಫೈಜಾ ತನ್ವೀರ್ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದರು. ಈ ಬಗ್ಗೆ ವಿಡಿಯೊವೊಂದನ್ನು ಕೂಡ ಟ್ವಿಟ್ಟರ್ ನಲ್ಲಿ ತಿಂಗಳ ಹಿಂದೆ ಅಪ್ ಲೋಡ್ ಮಾಡಿದ್ದರು.
ಇದಕ್ಕೆ ನಿನ್ನೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವೆ, ನಿಮಗೆ ಭಾರತದ 70ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸ್ವಾಗತ. ನಿಮ್ಮ ಚಿಕಿತ್ಸೆ ವೈದ್ಯಕೀಯ ವೀಸಾ ಕೊಡಿಸುತ್ತೇವೆ ಎಂದಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ತನ್ವೀರ್, ನೀವು ನನಗೆ ತಾಯಿಯಿದ್ದಂತೆ. ಭಾರತ 70ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ದಯಮಾಡಿ ನನಗೆ ವೀಸಾ ಕೊಡಿಸಿ ಎಂದು ಕೇಳಿದ್ದರು.
ತನ್ವೀರ್ ಆಮ್ಲಬ್ಲಾಸ್ಟೊಮಾ ಎಂಬ ಬಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.
Thanks for your greetings on India's Independence day. We are giving you the visa for your treatment in India. https://t.co/jThT2KayoZ