ಪ್ರಧಾನಿ ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣ ನಿರಾಶಾದಾಯಕವಾಗಿತ್ತು: ಕಾಂಗ್ರೆಸ್ ನಾಯಕ ಆನಂದ್ ಶರ್ಮ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ನಿರಾಶಾದಾಯಕವಾಗಿತ್ತು...
ಕಾಂಗ್ರೆಸ್ ನ ಹಿರಿಯ ನಾಯಕ ಆನಂದ್ ಶರ್ಮ
ಕಾಂಗ್ರೆಸ್ ನ ಹಿರಿಯ ನಾಯಕ ಆನಂದ್ ಶರ್ಮ
Updated on
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ನಿರಾಶಾದಾಯಕವಾಗಿತ್ತು ಮತ್ತು ಸಮಾಜದ ಯುವಕರು, ರೈತರು ಮತ್ತು ದುರ್ಬಲ ವರ್ಗದವರ ವಿಶ್ವಾಸಕ್ಕೆ ದ್ರೋಹ ಬಗೆಯುವ ರೀತಿಯಲ್ಲಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮ, ಗೋರಖ್ ಪುರದ ಮಕ್ಕಳ ಸಾವಿನ ದುರಂತದ ಪರಿಸ್ಥಿತಿಯನ್ನು ಪ್ರಧಾನಿಯವರು ಅರ್ಥ ಮಾಡಿಕೊಂಡಿಲ್ಲ. ಆ ಘಟನೆ ನೈಸರ್ಗಿಕ ವಿಕೋಪಕ್ಕೆ ಸಮನಾಗಿ ಪರಿಗಣಿಸಿದ್ದಾರೆ ಎಂದರು.
ಪ್ರಧಾನ ಮಂತ್ರಿಯವರು ಗೋರಖ್ ಪುರ ದುರಂತವನ್ನು ನೈಸರ್ಗಿಕ ವಿಕೋಪದಂತೆ ಕ್ಷುಲ್ಲಕವಾಗಿ ನೋಡಿದ್ದಾರೆ. ಅವರಿಗೆ ಪರಿಸ್ಥಿತಿಯ ತೀವ್ರತೆ ಅರ್ಥವಾಗಿಲ್ಲ ಎಂದು ಕಾಣುತ್ತದೆ. ಅವರು ಜಾಗರೂಕರಾಗಬೇಕಾಗಿತ್ತು ಎಂದು ಮಾಜಿ ಕೇಂದ್ರ ಸಚಿವರಾದ ಆನಂದ್ ಶರ್ಮಾ ಹೇಳಿದರು.
ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ಪ್ರಸ್ತಾಪಿಸಿದ ಅವರು, ಕೇವಲ ಹಕ್ಕುಗಳನ್ನು ಪ್ರತಿಪಾದಿಸುವ ಬದಲು ಅಲ್ಲಿನ ಸಮಸ್ಯೆಗಳಿಗೆ ಆಳವಾಗಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಪ್ರಧಾನಿಯವರು ತಮ್ಮ ಭಾಷಣದಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಸ್ತಾಪಿಸಿದರು. ಆದರೆ ಅದು ಒಂದು ವರ್ಷ ಹಳೆಯ ವಿಷಯ. ಕಳೆದ ಸೆಪ್ಟೆಂಬರ್ ನಂತರ ನಮ್ಮ ದೇಶದಲ್ಲಿ ಹಲವು ದಾಳಿಗಳು, ಗುಂಡಿನ ಚಕಮಕಿ ನಡೆದಿವೆ. ಅದರ ಬಗ್ಗೆ ಹೇಳಬೇಕಾಗಿತ್ತು. ಈ ಸಂದರ್ಭದಲ್ಲಿ, ಸುರಕ್ಷಿತ ಕೈಗಳಲ್ಲಿ ದೇಶದ ಹಿತಾಸಕ್ತಿ ನೀಡುವ ಬಗ್ಗೆ ದೇಶದ ಜನತೆಗೆ ಭರವಸೆ ನೀಡಬೇಕಾಗಿತ್ತು ಎಂದರು.
ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ಮಾತನಾಡಿದ್ದರ ಬಗ್ಗೆ ಆನಂದ್ ಶರ್ಮ, ಮಾರ್ಚ್ 31ರ ನಂತರ ಅಪಮೌಲ್ಯಗೊಂಡ ಕರೆನ್ಸಿಗಳನ್ನು ವಶಪಡಿಸಿಕೊಂಡ ದಾಖಲೆಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏಕೆ ಮೌನವಾಗಿದೆ? ಸರಕು ಮತ್ತು ಸೇವಾ ತೆರಿಗೆ ಜಾರಿ ವಿರೋಧ ಪಕ್ಷಗಳ ಬೆಂಬಲದಿಂದ ಸಾಧ್ಯವಾಯಿತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com