ಡಾಟಾ ಸುರಕ್ಷತೆ ಕ್ರಮಗಳ ವಿಧಾನಗಳನ್ನು ತಿಳಿಸುವಂತೆ 21 ಮೊಬೈಲ್ ಕಂಪೆನಿಗಳಿಗೆ ಕೇಂದ್ರ ಸರ್ಕಾರ ನೊಟೀಸ್

ಬಳಕೆದಾರರು ಉಪಯೋಗಿಸುವ ಮೊಬೈಲ್ ನ ಡಾಟಾಗಳ ಗೌಪ್ಯತೆ ಮತ್ತು ಖಾಸಗಿತನದ ಬಗ್ಗೆ ಕಾಳಜಿವಹಿಸಿರುವ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಬಳಕೆದಾರರು ಉಪಯೋಗಿಸುವ ಮೊಬೈಲ್ ನ ಡಾಟಾಗಳ ಗೌಪ್ಯತೆ ಮತ್ತು ಖಾಸಗಿತನದ ಬಗ್ಗೆ ಕಾಳಜಿವಹಿಸಿರುವ ಕೇಂದ್ರ ಸರ್ಕಾರ, ಚೀನಾ ದೇಶದ ಪ್ರಮುಖ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಗಳು ಸೇರಿದಂತೆ ಎಲ್ಲಾ ಸ್ಮಾರ್ಟ್ ಫೋನ್ ಉತ್ಪಾದಕರಿಗೆ ಡಾಟಾಗಳ ಭದ್ರತೆಗೆ ಅನುಸರಿಸುವ ವಿಧಾನಗಳು ಮತ್ತು ಚೌಕಟ್ಟನ್ನು ಒದಗಿಸುವಂತೆ ಕೇಳಿದೆ.
ಪಿಟಿಐ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಚೀನಿಯೇತರ ಮೊಬೈಲ್ ಫೋನ್ ಉತ್ಪಾದಕರಾದ ಆಪಲ್, ಸ್ಯಾಮ್ ಸಂಗ್, ಬ್ಲಾಕ್ ಬೆರ್ರಿ ಮತ್ತು ಭಾರತೀಯ ಸ್ಮಾರ್ಟ್ ಫೋನ್ ಉತ್ಪಾದಕ ಕಂಪೆನಿಗಳಿಗೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೊಟೀಸ್ ಕಳುಹಿಸಿದೆ.
ಚೀನಾದ ಪ್ರಮುಖ ಬ್ರಾಂಡ್ ಕಂಪೆನಿಗಳಾದ ವಿವೊ, ಒಪ್ಪೊ, ಕ್ಸಿಯೊಮಿ ಮತ್ತು ಜಿಯೊನಿ ಸೇರಿದಂತೆ 21 ಫೋನ್ ತಯಾರಿಕಾ ಕಂಪೆನಿಗಳಿಗೆ ನೊಟೀಸ್ ಜಾರಿ ಮಾಡಿರುವ ಕೇಂದ್ರ ಸರ್ಕಾರ, ಮೊಬೈಲ್ ನಲ್ಲಿ ಗ್ರಾಹಕರ ಡಾಟಾಗಳನ್ನು ಸುರಕ್ಷಿತವಾಗಿ ಮತ್ತು ಗೌಪ್ಯವಾಗಿ ಹೇಗೆ ಕಾಪಾಡುತ್ತಾರೆ ಎಂಬ ಬಗ್ಗೆ ವಿವರವಾದ ರಚನಾತ್ಮಕ ಲಿಖಿತ ಪ್ರತಿಕ್ರಿಯೆ ನೀಡುವಂತೆ ಸರ್ಕಾರ ಹೇಳಿದೆ.
ಭಾರತ ಮತ್ತು ಚೀನಾ ಮಧ್ಯೆ ಡೊಕ್ಲಮ್ ಪ್ರಾಂತ್ಯದ ವಿವಾದ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ , ಮತ್ತು ಚೀನಾದ ಮಾಹಿತಿ ತಂತ್ರಜ್ಞಾನ ಹಾಗೂ ದೂರಸಂಪರ್ಕ ಉಪಕರಣಗಳನ್ನು ಆಮದು ಮಾಡಿಕೊಳ್ಳಬಾರದೆಂದು ಒತ್ತಾಯ ಹೆಚ್ಚಾಗಿ ಕೇಳಿಬರುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಈ ಆದೇಶ ಬಂದಿದೆ. ಒಂದು ಅಂದಾಜಿನ ಪ್ರಕಾರ, 2016-17ರಲ್ಲಿ ಭಾರತ 3.7 ಶತಕೋಟಿ ಡಾಲರ್ ನಷ್ಟು ಮೊಬೈಲ್ ಫೋನ್ ಗಳನ್ನು ಆಮದು ಮಾಡಿಕೊಂಡಿದೆ.
ಕೇಂದ್ರ ಸರ್ಕಾರದ ಈ ಆದೇಶದಿಂದ ಮೊಬೈಲ್ ಫೋನ್ ಗಳಲ್ಲಿ ಮಾಹಿತಿಗಳ ಹ್ಯಾಕ್ ಮಾಡುವ ಭೀತಿ ಎದುರಾಗಿದೆ. ಹಲವು ಚೀನಾ ಉತ್ಪಾದಕ ಫೋನ್ ಗಳ ಸರ್ವರ್ ಗಳು ಇರುವುದು ಚೀನಾದಲ್ಲಿ. ಗ್ರಾಹಕರ ಖಾಸಗಿ ಮಾಹಿತಿಗಳು ಕದಿಯುವ ಭೀತಿ ಎದುರಾಗಿದೆ.
ನೊಟೀಸ್ ಗೆ ಉತ್ತರಿಸಲು ಇದೇ 28ರವರೆಗೆ ಸಚಿವಾಲಯ ಎಲ್ಲಾ ಕಂಪೆನಿಗಳಿಗೆ ಸೂಚಿಸಿದೆ.
ಕಂಪೆನಿಗಳು ನೀಡುವ ಪ್ರತಿಕ್ರಿಯೆಯನ್ನು ಆಧರಿಸಿ ಸಚಿವಾಲಯ ಅಗತ್ಯವಿರುವಲ್ಲಿ ಸಾಧನಗಳ ಪರಿಶೀಲನೆ ಮತ್ತು ಆಡಿಟ್ ನಡೆಸಲಿದೆ.ನಿಶ್ಚಿತ ಕ್ರಮಗಳನ್ನು ಅನುಸರಿಸದಿದ್ದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 43(ಎ)ಯಡಿ ದಂಡ ವಿಧಿಸುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com