ಅಪಹರಣ ಪ್ರಕರಣ: ಜಾಮೀನು ನಿರಾಕರಣೆ; ಹೈಕೋರ್ಟ್ ಮೊರೆ ಹೋಗಲು ಮೇಧಾ ಪಾಟ್ಕರ್ ನಿರ್ಧಾರ

ನರ್ಮದಾ ಬಚಾವೋ ಆಂದೋಲನ ನಾಯಕಿಯಾದ ಮೇಧಾ ಪಾಟ್ಕರ್ ಗೆ ಅಪಹರಣ ಪ್ರಕರಣಕ್ಕೆ ಸಂಬಧಿಸಿದಂತೆ ಜಾಮೀನು ನಿರಾಕರಿಸಲಾಗಿದೆ
ದಿಗ್ವಿಜಯ್ ಸಿಂಗ್ ಅವರೊಂದಿಗೆ ಪತ್ನಿ ಅಮೃತಾ ರೈ ಮತ್ತು ಸ್ಥಳೀಯ ಪಕ್ಷದ ನಾಯಕರು ಬುಧವಾರ ಧಾರ್ ಜಿಲ್ಲೆಯ ಜೈಲಿನಲ್ಲಿ ಎನ್ಬಿಎ ನಾಯಕ ಮೇಧಾ ಪಾಟ್ಕರ್ ಅವರನ್ನು ಭೇಟಿಯಾದರು
ದಿಗ್ವಿಜಯ್ ಸಿಂಗ್ ಅವರೊಂದಿಗೆ ಪತ್ನಿ ಅಮೃತಾ ರೈ ಮತ್ತು ಸ್ಥಳೀಯ ಪಕ್ಷದ ನಾಯಕರು ಬುಧವಾರ ಧಾರ್ ಜಿಲ್ಲೆಯ ಜೈಲಿನಲ್ಲಿ ಎನ್ಬಿಎ ನಾಯಕ ಮೇಧಾ ಪಾಟ್ಕರ್ ಅವರನ್ನು ಭೇಟಿಯಾದರು
Updated on
ಭೋಪಾಲ್: ನರ್ಮದಾ ಬಚಾವೋ ಆಂದೋಲನ ನಾಯಕಿಯಾದ ಮೇಧಾ ಪಾಟ್ಕರ್ ಗೆ ಅಪಹರಣ ಪ್ರಕರಣಕ್ಕೆ ಸಂಬಧಿಸಿದಂತೆ ಜಾಮೀನು ನಿರಾಕರಿಸಲಾಗಿದೆ. ಧಾರ್ ಜಿಲ್ಲೆಯಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶರು ಮೇಧಾ ಪಾಟ್ಕರ್ ಜಾಮೀನನ್ನು ನಿರಾಕರಿಸಿದರು. ಇದರಿಂದಾಗಿ ಮೇಧಾ ಪಾಟ್ಕರ್ ಇನ್ನೂ ಹೆಚ್ಚಿನ ಅವಧಿಯನ್ನು ಜೈಲಿನಲ್ಲೇ ಕಳೆಯುವಂತಾಯಿತು. 
ಧಾರ್ ಜಿಲ್ಲೆಯ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣ ವ್ಯಾಸ್ ಬುಧವಾರ ಮೂರು ಪ್ರಕರಣಗಳಲ್ಲಿ ಪಾಟ್ಕರ್ ಅವರ ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸಿದರು. ಪಾಟ್ಕರ್  ನ್ಯಾಯಾಲಯದ ವಜಾಗೊಳಿಸುವಿಕೆಯಿಂದ ಸಾರ್ವಜನಿಕ ಸೇವೆಯ ತಡೆ (ಐಪಿಸಿಯ ಸೆಕ್ಷನ್ 353) ವಿರುದ್ಧದ ಎರಡು ಪ್ರಕರಣಗಳಲ್ಲಿ ನ್ಯಾಯಾಲಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅದಕ್ಕೂ ಮುನ್ನ ಆಗಸ್ಟ್ 1 ರಂದು ಎನ್ಬಿಎ ಕಾರ್ಯಕರ್ತರಿಂದ ಆದಾಯ ಇಲಾಖೆಯ ಸಿಬ್ಬಂದಿ ಅಪಹರಣಕ್ಕೆ ಸಂಬಂಧಿಸಿದಂತೆ (ಐಪಿಸಿ ವಿಭಾಗ 365) ನ್ಯಾಯಾಲಯವು ತನ್ನ ಜಾಮೀನು ನಿರಾಕರಿಸಿತ್ತು.  
ಇದಕ್ಕೂ ಮುನ್ನ ಪಾಟ್ಕರ್ ಪರ ವಕೀಲ ರಾಜ್ಪ್ರಕಾಶ್ ಪಹಾಡಿಯಾ ಅವರು ಪತ್ರಕರ್ತರೊಂದಿಗೆ ಮಾತನಾಡಿ ಅಪಹರಣ ಪ್ರಕರಣಾಕ್ಕೆ ಸಂಂಧಿಸಿ ಮಧ್ಯ ಪ್ರದೇಶದ ಇಂದೋರ್ ನ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದರು.
ಆಗಸ್ಟ್ 1 ರಂದು, ಧಾರ್ ಜಿಲ್ಲೆಯ ಚಿಕಿಲ್ಡಾ ಗ್ರಾಮದಲ್ಲಿ ಪಾಟ್ಕರ್ ಮತ್ತು ಇತರರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಎನ್ಬಿಎ ಕಾರ್ಯಕರ್ತರು  ನಯಾಬ್ ತಹಸೀಲ್ಡರ್ ಸೇರಿದಂತೆ ಆದಾಯ ಇಲಾಖೆಯ ಸಿಬ್ಬಂದಿಗಳನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಜತೆಗೆ ಕಾರ್ಯಕರ್ತರು ಅವರಿಂದ ಸರ್ಕಾರ ಫೈಲುಗಳನ್ನು ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ.
ಅಪಹರಣ ಪ್ರಕತಣಾ, ಸಾರ್ವಜನಿಕ ಸೇವೆಗಳಲ್ಲಿದ್ದವರನ್ನು ತಡೆದದ್ದು ಸೇರಿ ವಿವಿಧ ಪ್ರಕರಣಕ್ಕೆ ಸಂಬಂಧಿಸಿ ಪಾಟ್ಕರ್ ಆಗಸ್ಟ್ 9 ರವರೆಗೂ ಜೈಲಿನಲ್ಲಿದ್ದರು. 
ಆಗಸ್ಟ್ 12 ರಂದು ಖುಕ್ಷಿ-ಧಾರ್ನಲ್ಲಿನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (ಜೆಎಂಎಫ್) ನ್ಯಾಯಾಲಯವು ಉಳಿದ ಪ್ರಕರಣದಲ್ಲಿ ಜಾಮೀನು ನೀಡಿದ್ದು ನಿಷೇಧಿತ ಆದೇಶಗಳನ್ನು ಉಲ್ಲಂಘಿಸಿರುವ ಪ್ರಕರಣದಲ್ಲಿ ಮೂರು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದೆ. ಇದರೊಂದಿಗೆ ಎಡಿಜೆ ಕಕ್ಷಿ ನ್ಯಾಯಾಲಯದಲ್ಲಿ ಈಗಾಗಲೇ ಮೂರು ಪ್ರಕರಣದ ವಿಚಾರಣೆ ಬಾಕಿ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com