ಡಾರ್ಜಲಿಂಗ್ ನಲ್ಲಿ ಬಾಂಬ್ ಸ್ಪೋಟ, ಜೀವಹಾನಿ ಇಲ್ಲ.

ಪಶ್ಚಿಮ ಬಂಗಾಳದ ಡಾರ್ಜಲಿಂಗ್ ನಲ್ಲಿ ಶನಿವಾರ ನ್ಬಸುಕಿನ ವೇಳೆ ಬಂಬ್ ಸ್ಫೋಟ ಸಂಭವಿಸಿದ್ದು ಹಲವಾರು ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿದೆ. ಆದರೆ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಇಲ್ಲ.
ಡಾರ್ಜಲಿಂಗ್ ನಲ್ಲಿ ಬಾಂಬ್ ಸ್ಪೋಟ,
ಡಾರ್ಜಲಿಂಗ್ ನಲ್ಲಿ ಬಾಂಬ್ ಸ್ಪೋಟ,
ಕೋಲ್ಕತ್ತ: ಪಶ್ಚಿಮ ಬಂಗಾಳದ ಡಾರ್ಜಲಿಂಗ್ ನಲ್ಲಿ ಶನಿವಾರ ನ್ಬಸುಕಿನ ವೇಳೆ ಬಂಬ್ ಸ್ಫೋಟ ಸಂಭವಿಸಿದ್ದು ಹಲವಾರು ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿದೆ. ಆದರೆ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಇಲ್ಲ. 
ಶನಿವಾರ ಬೆಳಗಿನ 12.15 ಗಂಟೆಯ ಸಮಯದಲ್ಲಿ ನಗರದ ಹಳೆ ಸೂಪರ್ ಮಾರ್ಕೆಟ್ ಮುಂಭಾಗ ಬಾಂಬ್ ಸ್ಪೋಟಗೊಂಡಿದ್ದು ಆ ಸಮಯ ಅಲ್ಲಿ ಯಾವ ಜನ ಸಂಚಾರವಿರಲಿಲ್ಲ. ಆದರೆ ಇದರಿಂದ ಒಟ್ಟು 12 ಅಂಗಡಿಗಳಿಗೆ ಹಾನಿ ಉಂಟಾಗಿದೆ. 
ಘಟನೆ ಕುರಿತಂತೆ ತನಿಖೆ ಕೈಗೊಂಡಿದ್ದೇವೆ. ಶೀಘ್ರದಲ್ಲಿ ತಪ್ಪಿತಸ್ಥರನ್ನು ಕಂಡು ಹಿಡಿಯುತ್ತೇವೆಂದು ಡಾರ್ಜಲಿಂಗ್ ಪೊಲೀಸ್ ಸುಪರಿಟೆಂಡೆಂಟ್ ಅಖೀಲೇಶ್‌ ಕುಮಾರ್‌ ಚತುರ್ವೇದಿ ತಿಳಿಸಿದ್ದಾರೆ. 
ಪ್ರತ್ಯೇಕ ಗೋರ್ಖಾ ಲ್ಯಾಂಡ್‌ ರಾಜ್ಯ ರಚನೆಯನ್ನು ಆಗ್ರಹಿಸಿ ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಕರೆ ನೀಡಿರುವ  ಅನಿರ್ದಿಷ್ಟಾವಧಿ ಬಂದ್‌ನ 69ನೇ ದಿನ ಈ ಬಾಂಬ್‌ ಸ್ಫೋಟ ಸಂಭವಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com