ಪಹ್ಲಾಜ್ ನಿಹ್ಲಾನಿ
ದೇಶ
ಸ್ಮೃತಿ ಇರಾನಿಯ ಕಾರಣದಿಂದ ನನ್ನನ್ನು ವಜಾಗೊಳಿಸಲಾಯಿತು: ಪಹ್ಲಾಜ್ ನಿಹ್ಲಾನಿ
ಸೆನ್ಸಾರ್ ಮಂಡಳಿಯ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹ್ಲಾನಿ ತಮ್ಮ ಹುದ್ದೆಯಿಂದ ವಜಾಗೊಳ್ಳುವುದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯೇ ಕಾರಣ ಎಂದು ಹೇಳಿದ್ದಾರೆ.
ಮುಂಬೈ: ಸೆನ್ಸಾರ್ ಮಂಡಳಿಯ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹ್ಲಾನಿ ತಮ್ಮ ಹುದ್ದೆಯಿಂದ ವಜಾಗೊಳ್ಳುವುದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯೇ ಕಾರಣ ಎಂದು ಹೇಳಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ನಿಹ್ಲಾನಿ ಅವರು ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವೆ ಸ್ಮೃತಿ ಇರಾನಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸ್ಮೃತಿ ಇರಾನಿ ಹೋದ ಇಲಾಖೆಯಲ್ಲೆಲ್ಲಾ ವಿವದಗಳು ಉಂಟಾಗುತ್ತವೆ ಎಂದಿದ್ದಾರೆ. ಇದೇ ವೇಳೆ ಉಡ್ತಾ ಪಂಜಾಬ್, ಸಲ್ಮಾನ್ ಖಾನ್ ಅವರ ಭಜರಂಗಿ ಭಾಯಿಜಾನ್ ಚಿತ್ರಗಳಿಗೆ ಕೇಂದ್ರ ಹೇಗೆ ನಿರ್ದೇಶನ ನೀಡುತ್ತಿತ್ತು ಎಂಬುದನ್ನೂ ನಿಹ್ಲಾನಿ ಬಹಿರಂಗಪಡಿಸಿದ್ದಾರೆ.
ಇಂದು ಸರ್ಕಾರ್ ಸಿನಿಮಾಗೆ ಕತ್ತರಿ ಪ್ರಯೋಗ ಮಾಡದೇ ಸೆನ್ಸಾರ್ ಪ್ರಮಾಣ ಪತ್ರ ನಿಡುವಂತೆ ಸ್ಮೃತಿ ಇರಾನಿ ಸೂಚಿಸಿದ್ದರು, ಆದರೆ ನಾನು ನಿಯಮಾವಳಿಗಳಂತೆ ನಡೆದುಕೊಳ್ಳುವುದನ್ನು ಆಯ್ಕೆ ಮಾಡಿಕೊಂಡು ಅಗತ್ಯವಿದ್ದ ಕಡೆಗಳಲ್ಲಿ ಸೆನ್ಸಾರ್ ಮಾಡಿದ್ದೆ. ಇದರಿಂದ ಸ್ಮೃತಿ ಇರಾನಿ ಅವರ ಅಹಂ ಗೆ ಧಕ್ಕೆ ಉಂಟಾಗಿತ್ತು. ಇಲಾಖೆಯಲ್ಲಿ ತಮ್ಮ ಇರುವಿಕೆಯನ್ನು ತೋರಿಸಲು ನನ್ನನ್ನು ಟಾರ್ಗೆಟ್ ಮಾಡುವುದನ್ನು ಬಿಟ್ಟರೆ ಬೇರೆ ಆಯ್ಕೆಗಳಿರಲಿಲ್ಲ ಎಂದಿದ್ದಾರೆ. ಇದೇ ವೇಳೆ ತಮ್ಮ ಉತ್ತರಾಧಿಕಾರಿಯಾಗಿರುವ ಪರ್ಸೂನ್ ಜೋಷಿ ಅವರ ಬಗ್ಗೆ ನಿಹ್ಲಾನಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ