ರೈಲ್ವೆ ಮಂಡಳಿ ಅಧಿಕಾರಿ ಕೆ ಮಿತ್ತಲ್ ಅವರಿಗೆ ಸುರೇಶ್ ಪ್ರಭು ಸೂಚನೆ ನೀಡಿದ್ದು, ಮೇಲ್ನೋಟದ ಸಾಕ್ಷ್ಯಾಧಾರಗಳ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲು ಸುರೇಶ್ ಪ್ರಭು ಸೂಚಿಸಿದ್ದಾರೆ. ಇದೇ ವೇಳೆ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸುತ್ತಿರುವುದಾಗಿ ಸುರೇಶ್ ಪ್ರಭು ಹೇಳಿದ್ದು, ರೈಲ್ವೆ ಮಾರ್ಗವನ್ನು ಪುನಃಸ್ಥಾಪಿಸುವ ಕೆಲಸವನ್ನು ತ್ವರಿತಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.