ನಾವು ಒಂದೇ ಅಮ್ಮನ ಮಕ್ಕಳು, ಅಮ್ಮನ ಆತ್ಮದ ಪ್ರೇರಣೆಯಿಂದಲೇ ವಿಲೀನ: ಒಪಿಎಸ್, ಇಪಿಎಸ್ ಹೇಳಿಕೆ

ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಎರಡು ಬಣಗಳು ವಿಲೀನಗೊಂಡಿದ್ದು, ಮಾಜಿ ಸಿಎಂ ಜಯಲಲಿತಾ ಅವರ ಆತ್ಮದ ಪ್ರೇರಣೆಯಿಂದಲೇ ಎಐಎಡಿಎಂಕೆ ವಿಲೀನ ಸಾಧ್ಯವಾಗಿದೆ ಎಂದು ಪನ್ನೀರ್ ಸೆಲ್ವಂ ಹಾಗೂ
ಪನ್ನೀರ್ ಸೆಲ್ವಂ-ಎಡಪ್ಪಾಡಿ ಪಳನಿಸ್ವಾಮಿ
ಪನ್ನೀರ್ ಸೆಲ್ವಂ-ಎಡಪ್ಪಾಡಿ ಪಳನಿಸ್ವಾಮಿ
ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಎರಡು ಬಣಗಳು ವಿಲೀನಗೊಂಡಿದ್ದು, ಮಾಜಿ ಸಿಎಂ ಜಯಲಲಿತಾ ಅವರ ಆತ್ಮದ ಪ್ರೇರಣೆಯಿಂದಲೇ ಎಐಎಡಿಎಂಕೆ ವಿಲೀನ ಸಾಧ್ಯವಾಗಿದೆ ಎಂದು ಪನ್ನೀರ್ ಸೆಲ್ವಂ ಹಾಗೂ ಎಡಪ್ಪಾಡಿ ಪಳನಿಸ್ವಾಮಿ ಹೇಳಿದ್ದಾರೆ. 
ವಿಲೀನ ಪ್ರಕ್ರಿಯೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಪಳನಿಸ್ವಾಮಿ ಹಾಗೂ ಪನ್ನೀರ್ ಸೆಲ್ವಂ, ನಾವು ಒಂದೇ ಅಮ್ಮನ ಮಕ್ಕಳಾಗಿದ್ದೇವೆ, ಅಮ್ಮನ ಆತ್ಮದ ಪ್ರೇರಣೆಯಿಂದಲೇ ವಿಲೀನ ಸಾಧ್ಯವಾಗಿದೆ. ನಮ್ಮನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ, ಎಐಎಡಿಎಂಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸದೃಢವಾಗಲಿದೆ ಎಂದು ಹೇಳಿದ್ದಾರೆ. 
ಎಐಎಡಿಎಂಕೆ ಪಕ್ಷಕ್ಕೆ ಎಂಜಿಆರ್ ಹಾಗೂ ಜಯಲಲಿತಾ ಅವರ ಕೊಡುಗೆ ಅಪಾರವಾಗಿದೆ. ಪನ್ನೀರ್ ಸೆಲ್ವಂ ನಮ್ಮೆಲ್ಲರ ಪಾಲಿಗೆ ಓರ್ವ ಅಣ್ಣನಿದ್ದಂತೆ, ಒಗ್ಗಟ್ಟಿನಿಂದ ಎಂಜಿಆರ್, ಜಯಲಲಿತಾ ಕನಸನ್ನು ನನಸು ಮಾಡುತ್ತೇವೆ ಎಂದು ಉಭಯ ನಾಯಕರೂ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com