2018ರಿಂದ ಐಐಟಿ ಪ್ರವೇಶ ಪರೀಕ್ಷೆ ಆನ್ ಲೈನ್ ನಲ್ಲಿ

ಪ್ರತಿಷ್ಟಿತ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ ಪದವಿ ಪ್ರವೇಶಕ್ಕೆ ಮುಂದಿನ ವರ್ಷದಿಂದ ಪ್ರವೇಶ ಪರೀಕ್ಷೆ ಸಂಪೂರ್ಣವಾಗಿ ಆನ್ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪ್ರತಿಷ್ಟಿತ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ ಪದವಿ ಪ್ರವೇಶಕ್ಕೆ ಪರೀಕ್ಷೆ ಮುಂದಿನ ವರ್ಷದಿಂದ ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ನಡೆಯಲಿದೆ. ಶೈಕ್ಷಣಿಕ ಸಂಸ್ಥೆಯ ನೀತಿ ನಿಯಮಗಳ ಜಾರಿ ಮತ್ತು ಮೌಲ್ಯಮಾಪನವನ್ನು ಸರಳಗೊಳಿಸಲು ಜಂಟಿ ಪ್ರವೇಶ ಮಂಡಳಿ(ಜೆಎಬಿ) ನಿನ್ನೆ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿತು.
ಆನ್ ಲೈನ್ ಮಾದರಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ನಿಗದಿತ ಕೇಂದ್ರದಲ್ಲಿ ಬರೆಯಲಿದ್ದಾರೆ. ಪೆನ್ನು, ಕಾಗದ ಬಳಸುವ ಬದಲು ಪ್ರಶ್ನೆಗಳಿಗೆ ಕಂಪ್ಯೂಟರ್ ನಲ್ಲಿ ಉತ್ತರಿಸಬೇಕಾಗುತ್ತದೆ. ಪ್ರಸ್ತುತ ಆಪ್ಟಿಕಲ್ ಮಾರ್ಕ್ ರೀಡಿಂಗ್ ಶೀಟ್ ಗಳನ್ನು ಬಳಸಲಾಗುತ್ತಿದ್ದು, ಪೆನ್ನು ಅಥವಾ ಪೆನ್ಸಿಲ್ ನಿಂದ ವಿದ್ಯಾರ್ಥಿಗಳು ಭರ್ತಿ ಮಾಡಬೇಕಾಗುತ್ತಿತ್ತು. ಅದನ್ನು ಮೆಶಿನ್ ಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತಿತ್ತು. ಮುಂದಿನ ವರ್ಷದಿಂದ ಈ ಪರೀಕ್ಷಾ ವಿಧಾನ ಇರುವುದಿಲ್ಲ.
ಈ ಕುರಿತು ಹೇಳಿಕೆ ನೀಡಿರುವ ಐಐಟಿ ಮದ್ರಾಸ್ ನಿರ್ದೇಶಕ ಹಾಗೂ ಜಂಟಿ ಪ್ರವೇಶ ಮಂಡಳಿ-2017ರ ಅಧ್ಯಕ್ಷ  ಪ್ರೊ.ಭಾಸ್ಕರ್ ರಾಮಮೂರ್ತಿ, ಜೆಇಇ(ಅಡ್ವಾನ್ಸ್ ಡ್) ಪರೀಕ್ಷೆಯನ್ನು ಆನ್ ಲೈನ್ ನಲ್ಲಿ ಮುಂದಿನ ವರ್ಷದಿಂದ ನಡೆಸಲು ತೀರ್ಮಾನಿಸಲಾಗಿದೆ. ಪರೀಕ್ಷೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.
ಜೆಇಇ ಮುಖ್ಯ ಪರೀಕ್ಷೆಯನ್ನು ಆನ್ ಲೈನ್ ನಲ್ಲಿ ತೆಗೆದುಕೊಳ್ಳುವ  ಅವಕಾಶವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಜಾರಿಗೆ ತಂದಿತ್ತು.
ದೇಶಾದ್ಯಂತ ಎಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ಜೆಇಇ ಮುಖ್ಯ ಪರೀಕ್ಷೆ ಪ್ರವೇಶ ಪರೀಕ್ಷೆಯಾಗಿದ್ದು, ಜೆಇಇ ಅಡ್ವಾನ್ಸ್ ಡ್ ಪರೀಕ್ಷೆಗೆ ಅರ್ಹತಾ ಪರೀಕ್ಷೆಯಾಗಿದೆ. ಜೆಇಇ ಅಡ್ವಾನ್ಸ್ ಡ್ ಪರೀಕ್ಷೆ ಐಐಟಿ ಮತ್ತು ಎನ್ ಐಟಿಗಳ ಪ್ರವೇಶಕ್ಕೆ ಅರ್ಹತಾ ಪರೀಕ್ಷೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com