ಕಾಶ್ಮೀರ ಪ್ರತ್ಯೇಕತಾವಾದಿಗಳ ಪ್ರಕರಣ: ಆ.31 ರ ವರೆಗೆ ವಾನಿ ಜೈಲಿಗೆ
ಭಯೋತ್ಪಾದಕರಿಗೆ ಹಣ ಸಹಾಯ ಮಾಡುತ್ತಿದ್ದ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಪ್ರಕರಣದಕ್ಕೆ ಸಂಬಂಧಿಸಿದಂತೆ ಹವಾಲ ಡೀಲರ್ ಮೊಹಮ್ಮದ್ ಅಸ್ಲಮ್ ವಾನಿಯನ್ನು ಬಂಧಿಸಲಾಗಿದ್ದು, ಆ.31 ರ ವರೆಗೆ ಜೈಲಿಗೆ ಕಳಿಸಲಾಗಿದೆ.
ಕಾಶ್ಮೀರ ಪ್ರತ್ಯೇಕತಾವಾದಿಗಳ ಪ್ರಕರಣ: ಆ.31 ರ ವರೆಗೆ ವಾನಿ ಜೈಲಿಗೆ
ನವದೆಹಲಿ: ಭಯೋತ್ಪಾದಕರಿಗೆ ಹಣ ಸಹಾಯ ಮಾಡುತ್ತಿದ್ದ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಪ್ರಕರಣದಕ್ಕೆ ಸಂಬಂಧಿಸಿದಂತೆ ಹವಾಲ ಡೀಲರ್ ಮೊಹಮ್ಮದ್ ಅಸ್ಲಮ್ ವಾನಿಯನ್ನು ಬಂಧಿಸಲಾಗಿದ್ದು, ಆ.31 ರ ವರೆಗೆ ಜೈಲಿಗೆ ಕಳಿಸಲಾಗಿದೆ.
ದಶಕಗಳ ಹಿಂದಿನ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ಶಬೀರ್ ಶಾ ಒಳಗೊಂಡ ಪ್ರಕರಣ ಇದಾಗಿದ್ದು, ಹೆಚ್ಚಿನ ತನಿಖೆಗಾಗಿ ದೆಹಲಿ ಕೋರ್ಟ್ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಿ ಆ.31 ವರೆಗೆ ಜೈಲಿಗೆ ಕಳಿಸಿದೆ.
ಜಾರಿ ನಿರ್ದೇಶನಾಲಯದ ಅರ್ಜಿಯನ್ನು ಪುರಸ್ಕರಿಸಿದ ನ್ಯಾ.ಜಸ್ಜೀತ್ ಜೌರ್ ಆ.31 ರ ವರೆಗೆ ಹವಾಲ ಡೀಲರ್ ಮೊಹಮ್ಮದ್ ಅಸ್ಲಮ್ ವಾನಿಯನ್ನು ಜೈಲಿಗೆ ಕಳಿಸಿ ಆದೇಶ ಹೊರಡಿಸಿದ್ದಾರೆ. 2 ವಾರಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ವಾನಿಯನ್ನು ಕೋರ್ಟ್ ಎದುರು ಹಾಜರುಪಡಿಸಲಾಗಿತ್ತು.