ಜಮ್ಮುವಿನಲ್ಲಿ ಸಿಲುಕಿದ್ದ ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳು ಇಂದು ಮನೆಗೆ ವಾಪಸ್ಸು

ಜಮ್ಮುವಿನ ಉರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಪಾಕ್ ಆಕ್ರಮಿತ ಕಾಶ್ಮೀರದ 116 ನಿವಾಸಿಗಳು ಇಂದು ತಮ್ಮ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಉರಿ(ಜಮ್ಮು-ಕಾಶ್ಮೀರ): ಜಮ್ಮುವಿನ ಉರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಪಾಕ್ ಆಕ್ರಮಿತ ಕಾಶ್ಮೀರದ 116 ನಿವಾಸಿಗಳು ಇಂದು ತಮ್ಮ ಮನೆಗೆ ಹಿಂತಿರುಗಿದ್ದಾರೆ. ಶ್ರೀನಗರ ಮತ್ತು ಮುಜಾಫರ್ ಬಾದ್ ನಡುವೆ ಗಡಿ ನಿಯಂತ್ರಣ ರೇಖೆ ಬಳಿ ಬಸ್ ಸೇವೆ ಆರಂಭಗೊಂಡದ್ದರಿಂದ ನಿವಾಸಿಗಳಿಗೆ ತಮ್ಮ ಮನೆಗೆ ಹಿಂತಿರುಗಲು ಸಾಧ್ಯವಾಗಿದೆ.
ಪೂಂಚ್ ರವಲ್ಕೊಟೆ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ಪಾಕ್ ಆಕ್ರಮಿತ ಕಾಶ್ಮೀರ ಭಾಗದ 116 ನಿವಾಸಿಗಳು ಕಳೆದ ಒಂದು ತಿಂಗಳಿಂದ ಜಮ್ಮುವಿನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇಂದು ಅವರನ್ನು ಜಮ್ಮುವಿನ ಬರಮುಲ್ಲಾ ಜಿಲ್ಲೆಯಲ್ಲಿರುವ ಉರಿಯ ಗಡಿ ಭಾಗದ ಪಟ್ಟಣದಿಂದ ಮನೆಗೆ ಬಸ್ಸುಗಳಲ್ಲಿ ಮರಳಿದ್ದಾರೆ.
ಇನ್ನೊಂದು ಮಾರ್ಗವಾದ ಮುಘಲ್ ರಸ್ತೆಯಿಂದ ಹಲವು ಬಸ್ಸುಗಳ ಮೂಲಕ  ಪೊಕ್ ಪ್ರಯಾಣಿಕರು ಹಿಂತಿರುಗಿದ್ದಾರೆ. 
ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಪಡೆಯಿಂದ ತೀವ್ರ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com