ಮುಸ್ಲಿಂ ಮಹಿಳೆಯರಿಗೆ ಇಂದು ಐತಿಹಾಸಿಕ ದಿನ: ಶಯರಾ ಬಾನೊ

ಮುಸಲ್ಮಾನ ಮಹಿಳೆಯರಿಗೆ ಇಂದು ಐತಿಹಾಸಿಕ ದಿನ ಎಂದು ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್ ಗೆ....
ಶಯರ ಬಾನೊ
ಶಯರ ಬಾನೊ
ನವದೆಹಲಿ: ಮುಸಲ್ಮಾನ ಮಹಿಳೆಯರಿಗೆ ಇಂದು ಐತಿಹಾಸಿಕ ದಿನ ಎಂದು ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಶಯರಾ ಬಾನೊ ಪ್ರತಿಕ್ರಿಯೆ ನೀಡಿದ್ದಾರೆ.
ಮುಸ್ಲಿಂ ಸಮಾಜದಲ್ಲಿ ಮಹಿಳೆಯರ ಸ್ಥಿತಿಯನ್ನು ಅರ್ಥಮಾಡಿಕೊಂಡು ನೀಡಿರುವ ತೀರ್ಪನ್ನು ಸ್ವೀಕರಿಸಿ ಕೇಂದ್ರ ಸರ್ಕಾರ ಬೇಗನೆ ಕಾನೂನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ನ ತೀರ್ಪನ್ನು ಸ್ವಾಗತಿಸಿ ಸಮರ್ಥನೆ ಮಾಡಿಕೊಳ್ಳುತ್ತೇನೆ. ಇದು ಮುಸ್ಲಿಂ ಮಹಿಳೆಯರಿಗೆ ಐತಿಹಾಸಿಕ ದಿನವಾಗಿದೆ ಎಂದು ಬಾನೊ ಎಎನ್ ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮೂರು ಬಾರಿ ತಲಾಖ್ ಎಂದು ಹೇಳಿ ಬಾನೊ ಅವರ ಪತಿ ವಿಚ್ಛೇದನ ನೀಡಿದ್ದರು. ನಿಖಾ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಯನ್ನು ಕೂಡ ತೆಗೆದುಹಾಕುವಂತೆ ಬಾನೊ ಈ ಹಿಂದೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆ ಎರಡು ವಿಷಯಗಳ ಕುರಿತು ನ್ಯಾಯಾಲಯ ಸದ್ಯಕ್ಕೆ ತೀರ್ಪನ್ನು ಬದಿಗಿರಿಸಿದೆ.
ಅಖಿಲ ಭಾರತ ಮುಸ್ಲಿಂ ಮಹಿಳೆಯರ ವೈಯುಕ್ತಿಕ ಕಾನೂನು ಮಂಡಳಿ ಕೂಡ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದೆ. ಅದರ ಅಧ್ಯಕ್ಷೆ ಶೈಶ್ಟ ಅಂಬರ್ ಕೂಡ ತ್ರಿವಳಿ ತಲಾಖ್ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದಾರೆ. ಸಂಸತ್ತು ಈ ತೀರ್ಪನ್ನು ಎತ್ತಿಹಿಡಿಯಬೇಕು ಎಂದು ನಾವು ಬಯಸುತ್ತೇವೆ. ಈ ತೀರ್ಪಿಗಾಗಿ ನಾವು ಕಾಯುತ್ತಿದ್ದೆವು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com