ಕೋಟಾ: ಪ್ರಸಕ್ತ ಶೇ. 44 ರಷ್ಟಿರುವ ಎಫ್ ಎಂ ರೇಡಿಯೋ ಕೇಳುಗರ ಸಂಖ್ಯೆಯನ್ನು 2020 ರ ವೇಳೆಗೆ ಶೇ. 60 ಕ್ಕೆ ಏರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ಮಂತ್ರಿ ರಾಜವರ್ಧನ್ ಸಿಂಗ್ ರಾಥೋಡ್ ಹೇಳಿದರು.
ಮಾಹಿತಿ ಮತ್ತು ಪ್ರಸಾರದ ಖಾತೆ ರಾಜ್ಯ ಸಚಿವ, ಕೋಟಾದಲ್ಲಿ ಒಂದು ದಿನದ ಭೇಟಿಯ ಸಮಯದಲ್ಲಿ ಮಾತನಾಡಿ, ಸ್ಥಳೀಯ ಪ್ರಾಮುಖ್ಯತೆ ಇರುವ ವಿಷಯವನ್ನು ಎಫ್ ಎಂ ಕಾರ್ಯಕ್ರಮದಲ್ಲಿಆಳವಡಿಸಿಕೊಳ್ಳಲು ಎಫ್ ಎಂ ಪ್ರೊಡಕ್ಷನ್ ಗೆ ಕರೆ ನೀಡಿದರು.
"ಎಫ್ಎಂ ಪ್ರೊಡಕ್ಷನ್ ಮೆಟಿರಿಯಲ್ ಗಳು ವಿದ್ಯಾರ್ಥಿಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಬೇಕು," ಎಂದು ಅವರು ಹೇಳಿದರು, "ಎಫ್ ಎಂ ಕೇಳುವುದರಿಂದ ಭಾಷೆಯನ್ನು ಸುಧಾರಿಸಿಕೊಳ್ಲಬಹುದು ವಿದ್ಯಾರ್ಥಿಗಳಿಗೆ ಎಫ್ ಎಂ ಮನರಂಜನೆಯ ಉತ್ತಮ ಸಾಧನವಾಗಿದೆ"
ರಾಥೋಡ್, ದೇಶವು ಪ್ರಸ್ತುತ ಜನಸಂಖ್ಯೆಯ ಶೇ. 44 ಜನರು ಎಫ್ ಎಂ ಬಳಕೆ ಮಾಡುತ್ತಿದ್ದಾರೆ ಆದರೆ ಅದರ ವ್ಯಾಪ್ತಿಯನ್ನು 2020 ವೇಳೆಗೆ ಶೇ. 60 ಕ್ಕೆ ವಿಸ್ತರಿಸಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿಯ ಮಾಸಿಕ ರೇಡಿಯೊ ಕಾರ್ಯಕ್ರಮ ಆದ್ಯತೆಯ ಕಾರ್ಯಕ್ರಮವಾಗಿದೆ, ಆಲ್ ಇಂಡಿಯಾ ರೇಡಿಯೋದಲ್ಲಿ ಜನಪ್ರಿಯ ಕಾರ್ಯಕ್ರಮವಾಗಿ ದೇಶಾದ್ಯಂತ ಪ್ರಸಾರಗೊಳ್ಳುತ್ತಿರುಉವುದನ್ನು ಅವರು ಉಲ್ಲೇಖಿಸಿದರು.
ಆಲ್ ಇಂಡಿಯಾ ರೇಡಿಯೋ ಭಾರತದ ಜನಸಂಖ್ಯೆಯ ಶೇ. 99 ರಷ್ಟನ್ನು ತಲುಪುತ್ತದೆ ಅದೇ ಕಾರಣಕ್ಕೆ ಪ್ರಧಾನಿ 'ಮನ್ ಕಿ ಬಾತ್' ಪ್ರಸಾರಕ್ಕಾಗಿ ರೇಡಿಯೊವನ್ನು ಆಯ್ಕೆ ಮಾಡಿಕೊಂಡಿದ್ದಾರೆ, "ರಾಥೋಡ್ ಹೇಳಿದರು.
ಕೇಂದ್ರ ಸಚಿವ ಕೋಟಾ ಸಂಸದ ಓಂ ಬಿರ್ಲಾ ಅವರು ಎಫ್ ಎಂ ರೇಡಿಯೋ ಆವರ್ತನ 90.4 ಮೆಗಾ ಹರ್ಟ್ಸ್ ನಲ್ಲಿ ಕೇಳಬಹುದಾದ 'ಎಫ್ ಎಂ ಕಿಸಾನ್ ವಾಣಿ' ಲೋಗೊವನ್ನು ಅನಾವರಣಗೊಳಿಸಿದರು.