ಒಬಿಸಿ ಆದಾಯ ಮಿತಿ 6- 8 ಲಕ್ಷಕ್ಕೆ ಏರಿಕೆ: ಕೇಂದ್ರ ಸಚಿವ ಸಂಪುಟದ ನಿರ್ಧಾರ

ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳವರಿಗೆ (ಒಬಿಸಿ) ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ನಿಗದಿಗೊಳಿಸಲಾಗಿದ್ದ ಆದಾಯ ಮಿತಿಯನ್ನು ಆ.23 ರಂದು 6 ರಿಂದ 8
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳವರಿಗೆ (ಒಬಿಸಿ) ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ನಿಗದಿಗೊಳಿಸಲಾಗಿದ್ದ ಆದಾಯ ಮಿತಿಯನ್ನು ಆ.23 ರಂದು 6 ರಿಂದ 8 ಲಕ್ಷಕ್ಕೆ ಏರಿಕೆ ಮಾಡಿದೆ. 
ಇದೇ ವೇಳೆ ಮೀಸಲಾತಿ ಪ್ರಯೋಜನಗಳ ಸಮಾನ ಹಂಚಿಕೆ ಮಾಡುವ ನಿಟ್ಟಿನಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ)ಲ್ಲಿ  ಉಪ ವರ್ಗೀಕರಣ ಮಾಡುವುದಕ್ಕಾಗಿ ಆಯೋಗವನ್ನು ರಚನೆ ಮಾಡುವುದಾಗಿ ಘೋಷಿಸಿದೆ. ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿ ಗೋಷ್ಠಿ ನಡೆಸಿದ ಅರುಣ್ ಜೇಟ್ಲಿ ಸಚಿವ ಸಂಪುಟ ನಿರ್ಧಾರದಿಂದ ಇನ್ನು ಮುಂದೆ ವಾರ್ಷಿಕವಾಗಿ 8 ಲಕ್ಷ ಆದಾಯ ಗಳಿಸುತ್ತಿರುವ ಒಬಿಸಿ ವರ್ಗದವರೂ ಸಹ ಮೀಸಲಾತಿಗೆ ಅರ್ಹರಾಗಿರಲಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯಕ್ಕೆ ಒಬಿಸಿ ‘ಕೆನೆಪದರ’ದ ಮಿತಿಯನ್ನು ಈಗಿರುವ ₹ 6 ಲಕ್ಷದಿಂದ ₹ 10.50 ಲಕ್ಷಕ್ಕೆ ಏರಿಸುವಂತೆ ಶಿಫಾರಸು ಮಾಡಿತ್ತು. ಇದೀಗ ಕೇಂದ್ರ ಸರ್ಕಾರ ಮಿತಿಯನ್ನು 8 ಲಕ್ಷಕ್ಕೆ ಏರಿಕೆ ಮಾಡಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com