ಭಾರತ-ಚೀನಾ ಡೊಕ್ಲಾಮ್ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು: ಬ್ರಿಟೀಶ್ ರಾಯಭಾರಿ

ಭಾರತ-ಚೀನಾ ಡೊಕ್ಲಾಮ್ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕಿದೆ ಎಂದು ಭಾರತದ ಬ್ರಿಟೀಷ್ ರಾಯಭಾರಿ ಡೊಮಿನಿಕ್ ಅಸ್ಕ್ವಿತ್ ಅಭಿಪ್ರಾಯಪಟ್ಟಿದ್ದಾರೆ.
ಬ್ರಿಟನ್ ಹೈಕಮಿಷನರ್
ಬ್ರಿಟನ್ ಹೈಕಮಿಷನರ್
ಕೋಲ್ಕತ್ತಾ: ಭಾರತ-ಚೀನಾ ಡೊಕ್ಲಾಮ್ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕಿದೆ ಎಂದು ಭಾರತದ ಬ್ರಿಟೀಷ್ ರಾಯಭಾರಿ ಡೊಮಿನಿಕ್ ಅಸ್ಕ್ವಿತ್ ಅಭಿಪ್ರಾಯಪಟ್ಟಿದ್ದಾರೆ. 
ಉಭಯ ರಾಷ್ಟ್ರಗಳು ಡೊಕ್ಲಾಮ್ ವಿವಾದದಲ್ಲಿ ಬ್ರಿಟನ್ ನ ಮಧ್ಯಪ್ರವೇಶವನ್ನು ಕೋರಿಲ್ಲ ಆದ್ದರಿಂದ ಬ್ರಿಟನ್ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಡೊಮಿನಿಕ್ ಅಸ್ಕ್ವಿತ್ ಸ್ಪಷ್ಟಪಡಿಸಿದ್ದಾರೆ. ಡೊಕ್ಲಾಮ್ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಹಾಗೂ ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಭಾರತ, ಚೀನಾ ಪ್ರಯತ್ನಿಸುತ್ತಿವೆ ಎಂದು ಡೊಮಿನಿಕ್ ಅಸ್ಕ್ವಿತ್ ಹೇಳಿದ್ದಾರೆ. 
ಮುಂದಿನ ವಾರಗಳಲ್ಲಿ ಈ ಬಗ್ಗೆ ಚರ್ಚಿಸಲು ಭಾರತ-ಚೀನಾಗೆ ಅವಕಾಶಗಳು ದೊರೆಯಲಿವೆ ಆಗ ಈ ವಿಷಯ ಪ್ರಗತಿ ಸಾಧಿಸಲಿದೆ, ಇದಕ್ಕಾಗಿ ಉಭಯ ರಾಷ್ಟ್ರಗಳನ್ನೂ ನಾವು ಉತ್ತೇಜಿಸುತ್ತೇವೆ ಎಂದು ಡೊಮಿನಿಕ್ ಅಸ್ಕ್ವಿತ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com