ಆಂಧ್ರ ಪ್ರದೇಶ: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಉಪ ರಾಷ್ಟ್ರಪತಿ

ಉಪ ರಾಷ್ಟ್ರಪತಿಯಾದ ನಂತರ ಮೊದಲ ಸಲ ತಮ್ಮ ತವರು ರಾಜ್ಯ ಆಂಧ್ರ ಪ್ರದೇಶಕ್ಕೆ...
ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು
ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು
Updated on
ಅಮರಾವತಿ(ಆಂಧ್ರ ಪ್ರದೇಶ): ಉಪ ರಾಷ್ಟ್ರಪತಿಯಾದ ನಂತರ ಮೊದಲ ಸಲ ತಮ್ಮ ತವರು ರಾಜ್ಯ ಆಂಧ್ರ ಪ್ರದೇಶಕ್ಕೆ ಇಂದು ಭೇಟಿ ಮಾಡಿದ ಎಂ.ವೆಂಕಯ್ಯ ನಾಯ್ಡು,ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದರು.  ಅವರ ಜೊತೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕೂಡ ಇದ್ದರು.
ಈ ಯೋಜನೆಯಡಿ ಆಂಧ್ರ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಸುಮಾರು 2,25,000 ಮನೆಗಳನ್ನು ನಿರ್ಮಿಸಲಾಗುವುದು.
ಉಪ ರಾಷ್ಟ್ರಪತಿ ಹುದ್ದೆ ತಮಗೆ ದೊರಕಿದ್ದು ಆಕಸ್ಮಿಕ. ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು. 
ಕಠಿಣ ಶ್ರಮ ಮತ್ತು ಶಿಸ್ತು ತಮ್ಮ ಕೆಲಸದ ಅಜೆಂಡ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com