ಅಣ್ಣಾ ವಿವಿ: ಖಾಲಿ ಉಳಿದ ಶೇ.84 ಪಿಜಿ ಇಂಜಿನಿಯರಿಂಗ್ ಸೀಟುಗಳು

ತಮಿಳು ನಾಡಿನ ಅಣ್ನಾ ವಿಶ್ವವಿದ್ಯಾಲಯದ ಶೇ. 84 ರಷ್ಟು ಪಿಜಿ ಇಂಜಿನಿಯರಿಂಗ್ ಸೀಟುಗಳು ಭರ್ತಿ ಆಗದೆ ಹಾಗೆಯೇ ಉಳಿದಿವೆ
ಚೆನ್ನೈನಲ್ಲಿರುವ ಅಣ್ಣಾ ವಿಶ್ವವಿದ್ಯಾನಿಲಯ ಕ್ಯಾಂಪಸ್
ಚೆನ್ನೈನಲ್ಲಿರುವ ಅಣ್ಣಾ ವಿಶ್ವವಿದ್ಯಾನಿಲಯ ಕ್ಯಾಂಪಸ್
Updated on
ಚೆನ್ನೈ: ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದಿಂದ ಕಳೆದ ವಾರ ಕೊನೆಗೊಂಡ 19,677 ಸ್ನಾತಕೋತ್ತರ ಎಂಜಿನಿಯರಿಂಗ್ ಸೀಟುಗಳಲ್ಲಿ ಕೇವಲ 3,101 ಸಿಟುಗಳು ಸಾಮಾನ್ಯ ಪ್ರವೇಶ ಪ್ರಕ್ರಿಯೆಯಲ್ಲಿ ಭರ್ತಿಯಾಗಿದೆ. ಎಂದರೆ ಎಂಇ, ಎಮ್ ಟೆಕ್ ಮತ್ತು ಎಮ್ ಆರ್ಕ್ ನಂತಹ ಕೋರ್ಸುಗಳಲ್ಲಿ 84% ರಷ್ಟು ಸೀಟುಗಳು ಖಾಲಿ ಉಳಿದಿವೆ. ರಾಜ್ಯದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಹೆಚ್ಚಿನ ಸೀಟುಗಳು ಭರ್ತಿಯಾಗಿದ್ದು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಬೋಧನಾ ವಿಧಾನ ಮತ್ತು ಅನುಕೂಲತೆಗಳು ಉತ್ತಮವಾಗಿದೆ ಎಂದು ಅಲ್ಲಿನ ಜನರು ಅಭಿಪ್ರಾಯ ಪಡುತ್ತಿದ್ದಾರೆ. 
ಅಲ್ಲದೆ, ಎಂಜಿನಿಯರಿಂಗ್ ಪದವೀಧರರಿಗೆ ಕೆಲವೇ ಪರ್ಯಾಯ ಮಾರ್ಗಗಳಿವೆ. " ಹಿಂದಿನ ವರ್ಷಗಳಲ್ಲಿ ಸಹ  ಪರಿಸ್ಥಿತಿ ಹೀಗೆಯೇ ಇತ್ತು. ನಾವು ಖಾಸಗಿ ಕಾಲೇಜುಗಳಿಗೆ ಖಾಲಿ ಸೀಟುಗಳನ್ನು ಕೊಡಮಾಡುತ್ತೇವೆ ಅವರು ತಮ್ಮ ಸ್ಥಾನಗಳನ್ನು ತುಂಬಲು ಸ್ವತಂತ್ರರಾಗಿರುತ್ತಾರೆ "ಎಂದು ತಮಿಳುನಾಡು ಎಂಜಿನಿಯರಿಂಗ್ ಅಡ್ಮಿನಿಸ್ಟ್ರೇಶನ್ ಕಾರ್ಯದರ್ಶಿ ತಿಳಿಸಿದರು. ಬಿಇ ಪ್ರವೇಶಗಳಿಗೆ ಹೋಲಿಸಿದರೆ, ಖಾಸಗಿ ಕಾಲೇಜುಗಳು ಸರ್ಕಾರಿ ಕೋಟಾಗೆ ಶರಣಾಗುವ ಶೇ.65 ರಷ್ಟು ಸೀಟುಗಳಿಗೆ ಎಂಇ ಮತ್ತು ಎಂಟೆಕ್ ಸ್ಥಾನಗಳಿಗೆ ಭರ್ತಿ ಮಾಡಿಕೊಳ್ಳುತ್ತಿವೆ.
ಅಣ್ಣಾ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಎ. ಬಾಲಗುರುಸಮೀ ಅವರು ಹೇಳುವಂತೆ ಎಂಜಿನಿಯರಿಂಗ್ ನಲ್ಲಿ ಪದವಿ ಶಿಕ್ಷಣವನ್ನು ಮಾಡುವ ಆಸಕ್ತಿ ಹೊಂದಿರುವವರು ಹೆಚ್ಚಾಗಿ ಕಾಲೇಜು ಶಿಕ್ಷಣವನ್ನು ಅನುಸರಿಸುತ್ತಾರೆ ಎಂದು ಹೇಳಿದರು. ಅತ್ಯಂತ ಕಡಿಮೆ ವಿದ್ಯಾರ್ಥಿಗಳು ಬಿಇ ಕೋರ್ಸ್ ಅನ್ನು ತೆಗೆದುಕೊಳ್ಳುತ್ತಿದ್ದಾರೆ, ಇದೇ ವೇಳೆ ಅಲ್ಲಿನ ಖಾಸಗಿ ಕಾಲೇಜುಗಳು ಉಪನ್ಯಾಸಕರ ನೇಮಕಾತಿಯನ್ನು ಕಡಿಮೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com