ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಿಐಎಗೆ ಆಧಾರ್ ಅಂಕಿಅಂಶಗಳು ಸಿಗುವುದಿಲ್ಲ: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ

ಆಧಾರ್ ಕಾರ್ಡು ವ್ಯವಸ್ಥೆ ಕಠಿಣ ಭದ್ರತಾ ಲಕ್ಷಣಗಳನ್ನು ಹೊಂದಿದ್ದು ಯಾವುದೇ ಅಂಕಿಅಂಶಗಳು...
ನವದೆಹಲಿ:ಆಧಾರ್ ಕಾರ್ಡು ವ್ಯವಸ್ಥೆ ಕಠಿಣ ಭದ್ರತಾ ಲಕ್ಷಣಗಳನ್ನು ಹೊಂದಿದ್ದು ಯಾವುದೇ ಅಂಕಿಅಂಶಗಳು ಅನಧಿಕೃತವಾಗಿ ವರ್ಗಾವಣೆಯಾಗುವುದಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತು  ಪ್ರಾಧಿಕಾರ ತಿಳಿಸಿದೆ.
ಆಧಾರ್ ಬಯೋಮೆಟ್ರಿಕ್ ಪಡೆಯುವ ವ್ಯವಸ್ಥೆ ನಮ್ಮ ದೇಶದಲ್ಲಿಯೇ ಅಭಿವೃದ್ಧಿಪಡಿಸಲಾಗಿದ್ದು, ಅದರಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯಿದೆ. ಹೀಗಾಗಿ ಅನಧಿಕೃತವಾಗಿ ಅಂಕಿಅಂಶಗಳು, ದಾಖಲೆಗಳು ವರ್ಗಾವಣೆಯಾಗುವ  ಸಾಧ್ಯತೆಗಳಿಲ್ಲ ಎನ್ನುತ್ತದೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ.
ವಿಕಿಲೀಕ್ಸ್ ನಲ್ಲಿ ಮೊನ್ನೆ 25ರಂದು ಪ್ರಕಟಗೊಂಡ ವರದಿಯಂತೆ ಅಮೆರಿಕಾದ ಗುಪ್ತಚರ ಸಂಸ್ಥೆಯಾದ ಸಿಐಎ, ಕ್ರಾಸ್ ಮ್ಯಾಚ್ ಟೆಕ್ನಾಲಜಿಸ್ ಒದಗಿಸಿದ ತಂತ್ರಜ್ಞಾನವನ್ನು ಬಳಸುತ್ತದೆ. ಕಾಕತಾಳೀಯವೆಂಬಂತೆ ಇದೇ ಕಂಪೆನಿ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ಸಹ ಸೇವೆ ಒದಗಿಸುತ್ತದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ, ಆಧಾರ್ ಕಾರ್ಡಿನ ಮೂಲಕ ವ್ಯಕ್ತಿಯ ದಾಖಲೆಗಳು ಮತ್ತು ಮಾಹಿತಿಗಳನ್ನು ಸೋರಿಕೆ ಮಾಡಲಾಗುತ್ತಿದೆ ಎಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಮಾಹಿತಿ ನೀಡುತ್ತಿವೆ ಎಂದು ಸ್ಪಷ್ಟಪಡಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com